CLICK HERE FOR THOUSANDS OF FREE BLOGGER TEMPLATES »

Watch Lucia Movie online with English subtitles

Monday, 5 August 2013

Lucia


Huff finally I'm writing for a reason. This time its about a movie in Kannada called 'Lucia'. First time when I heard how the movie is being produced I was jealous because it was my Idea, (See here my old ppt https://dl.dropboxusercontent.com/u/61838033/MyProductnHouse.ppt). Later I felt happy that somebody is implementing it. Of-course the implementation techniques are different.
So I started following the updates about movie only because its about my idea some time back but was implemented by somebody today :)

I know being a Product developer @ work its not easy to market new idea/product in INDIA, its really really difficult. Really great effort by director Pawan Kumar ('Lifeu Ishtene' movie director) and TEAM. While following up I noted down some of the good initiatives/achievements from the team
1. Named as first film to be produced by audience
2. Held audition for singers in online for one of the song 'Thinbeda kammi '
3. All the singers who sang for this movie are new comers
4. One of the singer is from local orchestra
5. The movie music director is a new comer and was a techie before
6. Most of the technicians who worked behind are normal techies like you and me
7. First time in Indian cinema industry, a movie Premiere show is going to be held for normal people. You get a chance to sit beside celebrities and watch movie. To get a premiere movie ticket all you need to do is sing one of the song online and if you perform well you can choose the seat beside your favorite celebrity.
8. Won 'Best audience film' award in London Indian Film Festival
9. Discussions are going on to remake in Hindi

Seeing all this I became the distributor for the movie and its not for the money but for my idea :). Yes I'm one of the distributor and I too get the share when movie releases :). I already got my free music of the movie.You can also become the distributor by Pre-Ordering the movie and support the new initiative in Kannada industry.
You can Click here to Pre-Order.
And finally your ideas/suggestions to promote a movie in new ways are Welcome.

Cheers,

Thursday, 1 August 2013

Watch Lifeu Ishtene Kannada Movie Online

Thursday, 22 September 2011

ಕರಿಸಿರಿಯಾನ

ಅಬ್ಬಾ ಎಷ್ಟೊಂದು ತಿಂಗಳಾಯ್ತು ಈ ಬ್ಲಾಗ್ ಬರಿದೆ.. ಇವತ್ತು ಏನೋ ಒಂದು ತರ ಮಜಾ ಅನಿಸ್ತ ಇದೆ ಬರಿಯೋಕ್ಕೆ.. ಹೊಸ ಪುಸ್ತಕ ತಗೊಂಡಾಗ ಅದರ ಮೊದಲ ಹಾಳೆ ಮೇಲೆ ಬರೆಯುವಾಗ ಒಂದು ರೋಮಾಂಚನ ಆಗುತ್ತಲ್ಲ ಆ ರೀತಿ.. ನಾನು ಬರೆದಿರೋ  ಹಳೆ ಕವಿತೆಗಳನ್ನ ಓದಿದರೆ ನಾನೇ ಬರದಿದ್ದ ಅಂತ ಅನುಮಾನ ಬರುತ್ತೆ.. ಪೂರ್ತಿ ಆಗದೆ draft ಆಗೇ ಉಳಿದ  ಕವಿತೆಗಳನ್ನ ಒಂದೇ ಉಸಿರಲ್ಲಿ ಪೂರ್ತಿ ಮಾಡಲ ಅನಿಸುತ್ತೆ... ಹೇಳದೆ ಉಳಿದ ಎಷ್ಟೋ ವಿಷಯಗಳನ್ನ ಒಂದೇ ಸಮ ಹೇಳಬೇಕು ಅನಿಸುತ್ತೆ.. ಆದರೆ ಬರಿಬೇಕು ಅಂತ ಕೂತಾಗ ಮನಸ್ಸು ಖಾಲಿ ಖಾಲಿ..ನನ್ನ  ಪದಗಳ ಬಂಧ ಮುಗಿಯಿತ ಅಂತ ಬೇಜಾರ್ ಆಗುತ್ತೆ.. ನಮಗೆ ತುಂಬಾ ಕ್ಲೋಸ್ ಆಗಿದ್ದ ಫ್ರೆಂಡ್ ಬಹಳ ದಿವಸದ ಮೇಲೆ ಸಿಕ್ಕಾಗ ಮೌನನೆ ಹೆಚ್ಚು ಮಾತಾಗಿರುತ್ತೆ ಹಾಗೆ..
ಇರಲಿ ನಾನು ಈಗ ಬರಿಯೋಕ್ಕೆ ಹೊರಟಿದ್ದು ಇತ್ತೀಚಿಗೆ ನಾನು ಓದಿದ ಒಂದು ಪುಸ್ತಕದ ಬಗ್ಗೆ, ಪುಸ್ತಕದ ಹೆಸರು 'ಕರಿಸಿರಿಯಾನ '. ಒಂದು ಅದ್ಬುತ ಪುಸ್ತಕ.. ಇದಕ್ಕೆ ಕಥೆಗಿಂತ ಸಂಶೋಧನೆ ಎಂದರೆ ಹೆಚ್ಚು ಸೂಕ್ತ. ಈ ಪುಸ್ತಕದಲ್ಲಿ ಕೊಡುವ ಹೆಚ್ಚು ವಿವರಗಳು ಸತ್ಯ!

ನಮಗೆಲ್ಲ ತಿಳಿದಿರುವ ಹಾಗೆ ಹಂಪಿಯ ವಿಜಯನಗರ ಸಾಮ್ರಾಜ್ಯದಲ್ಲಿ ಇದ್ದ ಅಪೂರ್ವ ವಜ್ರ ವೈಡುರ್ಯಗಳು. ನಾವು ಕೇಳಿರುವ ಹಾಗೆ ಆಗಿನ ಕಾಲದಲ್ಲಿ ಬಂಗಾರವನ್ನ  ರಸ್ತೆಯಲ್ಲಿ ವ್ಯಾಪಾರ ಮಾಡುತಿದ್ದರು. ನಾವು ಹಂಪಿಗೆ ಹೋದಾಗ ಇಲ್ಲಿ ಎಲ್ಲಾದರು ಗುಂಡಿ ತೋಡಿದರೆ ನಮಗೆ ಒಂದು ಚೂರು ಬಂಗಾರ ಸಿಗಬಹುದ ಅಂತ ಅನಿಸಿರುತ್ತೆ. ಹಾಗಾದರೆ ವಿಜಯನಗರ ಸಾಮ್ರಾಜ್ಯ ನಾಶವಾದ ಮೇಲೆ ಅಷ್ಟೂ ಸಂಪತ್ತು/ನಿಧಿ ಎಲ್ಲಿಗೆ ಹೋಯಿತು? ಇದರ ಹುಡುಕಾಟವೇ ಈ ಪುಸ್ತಕ. ಲೇಖಕ ಕೆ ಏನ್  ಗಣೇಶಯ್ಯ ಅವರು ಒಬ್ಬ ವಿಜ್ಞ್ಯನಿಯು(Agricultural scientist) ಹೌದು. ಅವರ ಸಂಶೋಧನೆಯನ್ನ ಒಂದು ಕಥೆಯ ಮುಖಾಂತರ ಹೇಳಲು ಹೊರಟು ಕೊನೆಗೆ ಸಂಶೋಧನೆಗೆ ಸಹಕರಿಸಿದವರೇ ಕಥೆಯ ಪಾತ್ರಧಾರಿಗಳಾಗುತ್ತಾರೆ.

ಪುಸ್ತಕದಲ್ಲಿ ಬರುವ ಕೆಲವು ರೋಚಕ ವಿಷಯಗಳನ್ನ ಇಲ್ಲಿ ಹೇಳಲೇಬೇಕು. ವಿಜಯನಗರ ಸಾಮ್ರಾಜ್ಯ ನಾಶವಾದ ಮೇಲೆ ಕೃಷ್ಣ ದೇವರಾಯನ ಅಳಿಯ ರಾಮ ರಾಯ ೧೫೦೦ ಆನೆಗಳ ಮೇಲೆ ರಾಜ್ಯದ ಸಂಪತನ್ನ ಸಾಗಿಸುತ್ತಾನೆ. ಅದರಲ್ಲಿ ಕನಿಷ್ಠ ೫೦೦ ಆನೆಗಳ ಮೇಲೆ ನಿಧಿಯನ್ನ ಸಾಗಿಸಿರಬಹುದು. ಒಂದು ಆನೆಯ ಮೇಲೆ ೧ ಟನ್ ವಜ್ರ ವೈಡುರ್ಯ ಇತ್ತು ಅಂದುಕೊಂಡರು ಇನ್ನು ೫೦೦ ಆನೆಗಳ ಮೇಲಿದ್ದ ಸಂಪತ್ತು ಅದಿನ್ನೆಷ್ಟು ಇರಬಹುದು!!
ಹಾಗಾದರೆ ವಿಜಯನಗರ ಸಾಮ್ರಾಜ್ಯ ಹೇಗೆ ನಡೆಯುತ್ತಿತ್ತು? ಆಮೇಲೆ ಹೇಗೆ ನಾಶವಾಯಿತು? ಆ ನಂತರ ನಿಧಿಗಾಗಿ ಯಾರೆಲ್ಲ ಹೊಡೆದಾಡಿದರು?  ಆ ನಿಧಿ ಈಗಲು ಇರಬಹುದೇ? ಆ ನಿಧಿಯನ್ನ ಕೊನೆಗೆ ಎಲ್ಲಿ ಸಂರಕ್ಷಿಸಿದರು? ನಿಧಿ ಇಡುವ ಜಾಗದ ಮಾಹಿತಿಯನ್ನ  ಆ ಕಾಲದಲ್ಲಿ ಪೂರ್ವ ಆಲೋಚನೆಯಾಗಿ ಹೇಗೆ ಕಾಪಾಡಿ ಕೊಂಡು ಬಂದಿದ್ದರು? ಈಗಿರುವ ತಿರುಪತಿ ಅಷ್ಟೊಂದು ಪ್ರಸಿದ್ಧಿ ಮತ್ತು ಶ್ರೀಮಂತ ಹೇಗಾಯಿತು? ತಿರುಪತಿಯಲ್ಲಿರುವ ದೇವರು ನಿಜವಾಗಲು ತಿಮ್ಮಪನೆ ಎನ್ನುವ ಅನುಮಾನ? ಹಂಪಿ ನಗರದ ರಚನೆಯಲ್ಲೇ ಅವರು ಹೇಗೆ ಕೆಲವು ಮಾಹಿತಿಗಳನ್ನ ಇಟ್ಟಿದ್ದರು? ಇದೆಲ್ಲದಕ್ಕು ಉತ್ತರ interesting... ಎಲ್ಲದಕ್ಕೂ ಉತ್ತರ ಇಲ್ಲಿ ಹೇಳುವುದು ಸೂಕ್ತ ಅಲ್ಲ, ಆದ್ದರಿಂದ ಕೆಲವು ವಿಷಯಗಳನ್ನ ಮಾತ್ರ ಹಂಚಿಕೊಳ್ತೀನಿ.
ಕಥೆಯ ಸಾರಾಂಶ(ಪುಸ್ತಕದ ಹಿಂದೆ ಕೊಟ್ಟಿರುವ ಹಾಗೆ): ಕಾಶ್ಮೀರದ ಎತ್ತರದ ಮಂಜು ಪ್ರದೇಶದಲ್ಲಿ Alexanderನ ಸೈನ್ಯದ ಜೊತೆ ಬಂದ ಗ್ರೀಕ್ ದೇಶದವರೆನ್ನಲಾದ ಒಂದು ಜನಾಂಗದ ಜಾನಪದ ಪದ್ಧತಿಗಳ ಅಧ್ಯಯನದಲ್ಲಿ ತೊಡಗಿದ್ದ ಯುವ ಸಂಶೋಧಕಿ ಭಾವನಾಳನ್ನು ಭಾರತದ ಸೈನ್ಯವು ಹಟಾತ್ತನೆ ಸೆರೆ ಹಿಡಿದು ಹೊತೋಯುತ್ತದೆ. ಅದೇ ವೇಳೆಗೆ, ಅಕಸ್ಮಾತ್ ಆಗಿ ದೊರಕಿದ ಹಂಪಿಯ ನಾಡು ಜನರ, ಜಾನಪದ ನಂಬಿಕೆಯೊಂದರ ಬೆನ್ನು ಹತ್ತಿ ತಿರುಪತಿಯ ಬೆಟ್ಟಗಳಲ್ಲಿ ರಹಸ್ಯವೊಂದನ್ನು ಅರಸಿ ಹೊರಟಿದ್ದ ಪೂಜಾಳನ್ನು ಸಿ.ಬಿ.ಐ ಬಂಧಿಸಿ ಕರೆದೊಯುತ್ತದೆ. ತಾವು ಈ ಸೆರೆಯಿಂದ ಮುಕ್ತಿ ಹೊಂದುವ ಪ್ರಯತ್ನದಲ್ಲಿ ಇಬ್ಬರು ಕಂಡುಕೊಳ್ಳುವ ಚರಿತ್ರೆಯ ರಹಸ್ಯಗಳು, ವಿಜಯನಗರ ಕಾಲದ ಧರ್ಮ, ರಾಜಕೀಯದ ಸುತ್ತ ಬೆಳೆದ ಅಗಾಧ ನಿಧಿಯ ಸತ್ಯದತ್ತ ಕೆರೆದೊಯುತ್ತದೆ. ಆ ನಿಧಿಯ ಹುಡುಕಾಟವೇ ಕರಿಸಿರಿಯಾನ!
ನಿಧಿ ಇರುವ ಜಾಗದ ಮಾಹಿತಿಯನ್ನ ಜಾನಪದ ಹಾಡಿನಲ್ಲಿ encodeಮಾಡಿ ಇಡುತಿದ್ದರು. ಈ ಹಾಡುಗಳನ್ನ ಕಾಡಿನಲ್ಲಿ ವಾಸಿಸುವ ಗಿರಿ ಜನರು ಅಥವಾ ಹೆಳವರ ಜನಾಂಗದ ಮುಖ್ಯಸ್ತ ಮಾತ್ರ ರಾಜರ ಮುಂದೆ ಹಾಡುತಿದ್ದ ಮತ್ತು ಹಾಡುವಾಗ ಮೈ ಮೇಲೆ ಒಂದು ಚರ್ಮದ ಕವಚವನ್ನ ಹಾಕಿಕೊಂಡು ಕೆಲವು ಭಂಗಿಗಳನ್ನ ಮಾಡುತ್ತಾ ಹಾಡುತಿದ್ದ. ಆ ಜಾನಪದ ಹಾಡು, ಕವಚದ ಮೇಲಿನ ನಕ್ಷೆ ಮತ್ತು ಅವನ ಭಂಗಿಯನ್ನ decode ಮಾಡಿದರೆ ನಿಧಿ ಇರುವ ಜಾಗ ತಿಳಿಯುತ್ತಿತ್ತು!!! ಜನಾಂಗದ ಮುಖ್ಯಸ್ತ ತಾನು ಸಾಯವಾಗ ತನ್ನ ಮುಂದಿನ ಮುಖ್ಯಸ್ತನಿಗೆ ಹೇಳಿಕೊಡುತಿದ್ದ. ಹೀಗೆ ಅದರ ರಹಸ್ಯವನ್ನ ವರ್ಷಗಳ ಕಾಲ ಕಾಪಾಡಿ ಕೊಂಡು ಬಂದಿದ್ದರು. ನಿಧಿಯನ್ನ ಕೊನೆಗೆ ಎರಡು ಸ್ಥಳಗಳಲ್ಲಿ ಮುಚ್ಚಿಡುತ್ತಾರೆ ಒಂದು ಹಂಪಿಯ ಹತ್ತಿರ ಇನ್ನೊಂದು ತಿರುಪತಿಯ ಹತ್ತಿರ.

ಹಾಗಾದರೆ ನಿಧಿ ಇರುವ ಜಾಗ ಹೇಗೆ ಸಿಗುತ್ತೆ? ಆ ಜಾನಪದ ಹಾಡನ್ನ ಹೇಗೆ ಬಿಡಿಸುತ್ತಾರೆ? ಮತ್ತು ಮುಂಚೆ ಹೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರ ಪುಸ್ತಕದಲ್ಲಿ ಸಿಗುತ್ತದೆ. ಈಗ ನಿಮ್ಮ ಮನಸ್ಸಿನಲ್ಲಿ ಹಂಪಿ ವಿಜಯನಗರ ಸಾಮ್ರಾಜ್ಯದ ನಿಧಿಯ ಬಗ್ಗೆ ಒಂದು ಸಣ್ಣ ಕುತೂಹಲ ಮೂಡಿದರೆ ನನ್ನ ಈ ಬರಹ ಸಾರ್ಥಕ...

Wednesday, 15 December 2010

ಟೆಕ್ಕಿ ಅಂತ ಬದ್ಕುತಿದ್ದೆ..

ನನ್ನ ಮದುವೆಯ ಪ್ರಯುಕ್ತ.....

ಮೂಲ ಗೀತೆ: ಶಿವ ಅಂತ ಹೋಗುತಿದ್ದೆ ರೋಡಿನಲ್ಲಿ..
ಚಿತ್ರ : ಜಾಕಿ

ಟೆಕ್ಕಿ ಅಂತ ಬದ್ಕುತಿದ್ದೆ ಬೆಂಗಳೂರಲ್ಲಿ
ಸಿಕ್ಕಾಪಟ್ಟೆ ಕನಸು ಇತ್ತು ವೀಕೆಂಡ್ ನಲ್ಲಿ
ಅರ್ದಂಬರ್ದ ಕವಿತೆ ಇತ್ತು ಹಾರ್ಟಿನಲ್ಲಿ
ನೀ ಕಂಡೆ ಹುಡುಕಾಟದಲಿ..

ಕಂಡು ಕಂಡು ಬಿದ್ದಂಗಾಯಿತು ಹಳ್ಳದಲಿ
ಕಂಬ್ಳಿ ಹುಳ ಬಿಟ್ಟಾಂಗಾಯಿತು ಹಾರ್ಟಿನಲಿ
ಕಚಗುಳಿ ಇಟ್ಟಾಂಗಾಯಿತು ಬೆನ್ನಿನಲಿ
ನೀ ಕುಂತಾಗ ಎದುರಿನಲಿ
ಎದುರಿನಲಿ...ಎದುರಿನಲಿ...ಎದುರಿನಲಿ

ಜಾಸ್ತಿ ಹೊತ್ತು .. ನೋಡoಗಿಲ್ಲ
ಸುಮ್ನೆ ಸ್ಮೈಲು.. ಕೊಡಂಗಿಲ್ಲ

ಜಾಸ್ತಿ ಹೊತ್ತು .. ನೋಡoಗಿಲ್ಲ
ಸುಮ್ನೆ ಸ್ಮೈಲು.. ಕೊಡಂಗಿಲ್ಲ
ಅಯ್ಯೊ ಪಾಪ ಹುಡ್ಗಿ ಜೀವ ಹೆದರುವುದು
ತು ನಂಗೆ ಯಾಕೆ ಹಿಂಗೆ ಎಲ್ಲ ಅನಿಸುವುದು

ಒಂದು ಮಾತು.. ಕೇಳಲಿಲ್ಲ
ಒಂದು ಮಾತು ಕೇಳಲಿಲ್ಲ..ಬೇರೆ ಯಾರನು ನೋಡಲಿಲ್ಲ
ನನ್ನ ಅರ್ದ ಕವಿತೆ ಕಿತ್ತುಕೊಂಡು
ತಡ ಮಾಡದೆ ಪೂರ್ತಿ ಗೀಚಿ ಬಿಟ್ಲು
software ಅಂತ ಹುಡುಗ ನಾನು ತುಂಬ ಮೃದು
software ಅಂತ ಹುಡುಗ ನಾನು ತುಂಬ ಮೃದು
ಹೆಣ್ ಮಕ್ಳೇ ವೀಕು ಗುರು
ರಾಂಗು ಗುರು.. ರಾಂಗು ಗುರು.. ರಾಂಗು ಗುರು..ರಾಂಗು ಗುರು

ಒಂದು ಮನೆ .. ಬಾಡಿಗೆ ರೇಟು
ಒಂದು ಮನೆ ಬಾಡಿಗೆ ರೇಟು ಹತ್ತು ಸಾವಿರ ಆಗಿ ಹೋಯ್ತು
ಇಜಿಯಾಗಿ ಹೇಗೆ ನಾನು ಹ್ಞೂ ಅನ್ನಲಿ ಅದರಲ್ಲು ಮೊದಲನೆ ಭೇಟಿಯಲಿ
ಗ್ಯಾಸ್ ಕಾರ್ಡ್ ಬೇಕೆ ಬೇಕು ಸಂಸಾರಕ್ಕೆ
ಗ್ಯಾಸ್ ಕಾರ್ಡ್ ಬೇಕೆ ಬೇಕು ಸಂಸಾರಕ್ಕೆ
ಈ ಮದುವೆ ಬೇಕಾ ಗುರು
ಬೇಕು ಗುರು..ಬೇಕು ಗುರು..ಬೇಕು ಗುರು..ಬೇಕು ಗುರು

ಟೆಕ್ಕಿಅಂತ ಬದ್ಕುತಿದ್ದೆ ಬೆಂಗಳೂರಲ್ಲಿ
ಸಿಕ್ಕಾಪಟ್ಟೆ ಕನಸು ಇತ್ತು ವೀಕೆಂಡ್ ನಲ್ಲಿ
ಅರ್ದಂಬರ್ದ ಕವಿತೆ ಇತ್ತು ಹಾರ್ಟಿನಲ್ಲಿ
ನೀ ಕಂಡೆ ಹುಡುಕಾಟದಲಿ

Friday, 21 May 2010

ನಾ ಕವಿ - 21


ತವಕ
ಅವಳ ಕನಸಲ್ಲಿ ನಾಯಕನಾಗುವ ತವಕ
ಅವಳ ಹಾಡಿನ ರಾಗಕ್ಕೆ ಸ್ವರವಾಗುವ ತವಕ

ತವಕ
ಅವಳ ನಡಿಗೆಯಲ್ಲಿ ಕೈ ಹಿಡಿದು ಜೊತೆಯಾಗುವ ತವಕ
ಅವಳ ತುಟಿಯಂಚಿನ ಕಿರುನಗೆಗೆ ಕಾರಣವಾಗುವ ತವಕ

ತವಕ
ಮೊದಲ ಮಾತಿನಲ್ಲಿ ಅವಳ ಮೌನ ಕಸಿಯುವ ತವಕ
ಅವಳ ತವಕದಲ್ಲಿ ಮೂಡಿ ಬಂದ ಕವಿತೆ ತಂದಿದೆ ಎಂಥಹ ಪುಳಕ!

Friday, 26 March 2010

ಮತ್ತೊಮ್ಮೆ ಕವಿ ಗೋಷ್ಠಿ

ಒಂದು ಕವಿತೆಯ ಕಂಡು ಸ್ನೇಹಿತರ ಮನದಲ್ಲಿ ಮೂಡಿದ ಪದಗಳ ಲಹರಿ.....

ಮೂಲ ಕವಿತೆ :
"ನೂರೆಂಟು ನೆನಪುಗಳ ಗುಂಪು
ಹುಡುಕಿಹೆನು ಅದರಲಿ ನಿನ ಕಂಪು
ನಿನ ನೋಡುವ ಆಸೆ ಬಹಳಷ್ಟು
ಎನ್ ಕುತೂಹಲ...

ಕಾಣುವೆ ನಾ ನಡೆವ ದಾರಿಯಲಿ
ಕರಗುವೆ ಮರೀಚಿಕೆಯಂತೆ ಸಮೀಪಿಸಿದಷ್ಟು
ಆಟದಲಿ ನನ್ನ ಕಾಡುವೆ ನೀನೆಷ್ಟು
ಎನ್ ಕುತೂಹಲ...

ಛಾವಾಣಿಯ ತುದಿಯಲಿ ನಿಂತು
ಕೂಗಿಹೆನು ನಿನ್ನನು ಇಂತು
ಬೇಡಿಹೆನು ತಂಗಾಳಿಯ ತರಲು ನಿನ ಕಂಪು
ಎನ್ ಕುತೂಹಲ... "
-vadiraj

ನಾನು

"ನೂರೆಂಟು ಪ್ರಶ್ನೆಗಳ ಗಂಟು
ಹುಡುಕಿಹೆನು ಅದರಲ್ಲಿ ನಿನ್ನ ದಂಟು
ನಿನ್ನ ಕೇಳುವಾಸೆ ಬಹಳಷ್ಟು
ಹೇಳು ಯಾರ್ ಚೆಲುವೆ ?

ಕಾಣುವೆ ನಾ ನಿನ್ನ ಕವಿತೆಯಲ್ಲಿ
ಕರುಗುತಿರುವೆ ನೀ ಚೆಲುವೆಯ ನೆನೆದಷ್ಟು
ಗೆಳೆಯರಲ್ಲಿ ಮುಚ್ಚಿಡುವೆ ಇನ್ನೆಷ್ಟು
ಹೇಳು ಯಾರ್ ಚೆಲುವೆ ?"


Vadi

"ಯಾರಿಲ್ಲ ಗೆಳೆಯ ವಾಸ್ತವದಲ್ಲಿ
ಇರುವಳು ಚೆಲುವೆ ಕಲ್ಪನೆಯಲ್ಲಿ
ನೂರೆಂಟು ಭಾವನೆಗಳ ಮುಡಿಸುತ ..
ನೂರೆಂಟು ಮೋಹಗಳ ಕಲ್ಪಿಸುತ .. "


Harish

"ಯೋಚಿಸಿದೆ ಯಾಕೆ ಕವಿಗೋಷ್ಠಿ ಆರಂಬವಾಯಿತೆಂದು
ಅನಿಸುತಿದೆ ಯಾಕೋ ನಿಮಗೆ ಕೆಲಸವಿಲ್ಲವೆಂದು ….
ಹತ್ತಿದೆ ನನ್ನ ಮನದಲಿ ಬೆಂಕಿ ಇಂದು …..
ಕೇವಲ ನನಗೆ ಯಾಕೆ ಇಷ್ಟು ಕೆಲಸ ವಿರುವುದೆಂದು …"

Girish

"ಮರುಗದಿರು ಗೆಳೆಯ ನಿನ್ನ ಬವಣೆ ಕಂಡು
ನನ್ನ ಬಾಲಕ್ಕೆಕೆ ಲಕ್ಸ್ಮಿ ಪಟಾಕಿ ಎಂದು.....
ಸಂತೈಸಿಕೋ ನಿನ್ನ ಗೆಳೆಯರ ಬಾಲದ ರಾಕೆಟ್ ಕಂಡು....."

Nitin

"ಹುಡುಗಿ ನಿನ್ನ ಎಲ್ಲೇ ಹುಡುಕಲಿ
ನಿನ್ನ ನೆನಪು ಸದಾ ಕಣ್ಣಲಿ
ನೀನಿಲ್ಲದೆ ಹೇಗೆ ಬದುಕಲಿ
ಇರು ನೀ ನನ್ನ ಮನದಲ್ಲಿ
ಇಲ್ಲವಾದರೆ ಹೇಗೆ ಬದುಕಲಿ"


ಈಗ ಮೂಡಿ ಬರಲಿ ನಿಮ್ಮ ಪದಗಳ ಲಹರಿ...

Tuesday, 2 March 2010

ನಾ ಕವಿ 20

Inspired by: LIFE

ನೀ ಹಿಂಗ್ಯಾಕೆ?
ಪ್ರೀತಿಸಿದಷ್ಟು ದೂರ ಹೋಗುವೆ ಭಾವನೆಯ ಬಯಕೆಯಂತೆ.
ಮರೆತಷ್ಟು ಮರಳಿ ಬರುವೆ ನೆನಪಿನ ನಿಷ್ಟೆಯಂತೆ.

ನೀ ಹಿಂಗ್ಯಾಕೆ?
ಒಲವಿನ ಮಳೆಗರೆದಷ್ಟು ನಲಿವಾಗುವೆ ಕನಸಿನ ಕನವರಿಕೆಯಂತೆ.
ಸಾಧನೆಯ ಮೆಟ್ಟಿಲೇರಿದಷ್ಟು ಮುದ ನೀಡುವೆ ಮುಂಜಾವಿನ ಮಂಜಿನಂತೆ.

ನೀ ಹಿಂಗ್ಯಾಕೆ?
ಖಾಲಿಪೀಲಿ ಜೀವನದ ನಿನ್ನ ವಿಸ್ಮಯ ಉತ್ತರಿಸು ಬಾಬದುಕೆ


Powered by: ಶ್ರೀಹರ್ಷ


From: rudresh angadi [mailto:rudreshaa@gmail.com]
Sent: Tuesday, March 02, 2010 1:59 PM
To: harsha
Subject: Re: Naa kavi 20


nice one MP :-)

From: VadirajP.Kadur
Sent: Tuesday, March 02, 2010 2:36 PM
To: harsha; Nitin.Kulkarni; 'Pavan Nagaraj Dixit'; 'HarishC'; 'Halageri, Milind Indiresh'; 'Girish'
Subject: RE: Naa kavi 20

Last line punching ada le mulla….I like it so much!

From: Nitin.Kulkarni
Sent: Tuesday, March 02, 2010 2:37 PM
To: VadirajP.Kadur; harsha; 'Pavan Nagaraj Dixit'; 'HarishC'; 'Halageri, Milind Indiresh'; 'Girish'
Subject: RE: Naa kavi 20

Wah wah wah!!!!!!!!!!!!!!!!!!!!!!!!!!!!

From: Harish C
Sent: Tuesday, March 02, 2010 2:44 PM
To: 'Nitin.Kulkarni'; 'VadirajP.Kadur'; 'harsha'; 'Pavan Nagaraj Dixit'; 'Halageri, Milind Indiresh'; 'Girish'
Subject: RE: Naa kavi 20


Wah waha…harsha

From: Pavan Nagaraj Dixit
Sent: Tuesday, March 02, 2010 2:41 PM
To: VadirajP.Kadur; harsha; Nitin.Kulkarni; 'HarishC'; 'Halageri, Milind Indiresh'; 'Girish'
Subject: RE: Naa kavi 20


Cholo bardile……………

2010/3/2 anil kumar

Fantastic le MP nin kavithe...... Mast ada...

From: Nalina Reddy
Sent: Wednesday, March 03, 2010 10:37 PM
To: harsha
Subject: Re: Naa kavi 20

Its super.

Who is she?