ಒಂದು ಕವಿತೆಯ ಕಂಡು ಸ್ನೇಹಿತರ ಮನದಲ್ಲಿ ಮೂಡಿದ ಪದಗಳ ಲಹರಿ.....
ಮೂಲ ಕವಿತೆ :
"ನೂರೆಂಟು ನೆನಪುಗಳ ಗುಂಪು
ಹುಡುಕಿಹೆನು ಅದರಲಿ ನಿನ ಕಂಪು
ನಿನ ನೋಡುವ ಆಸೆ ಬಹಳಷ್ಟು
ಎನ್ ಈ ಕುತೂಹಲ...
ಕಾಣುವೆ ನಾ ನಡೆವ ದಾರಿಯಲಿ
ಕರಗುವೆ ಮರೀಚಿಕೆಯಂತೆ ಸಮೀಪಿಸಿದಷ್ಟು
ಈ ಆಟದಲಿ ನನ್ನ ಕಾಡುವೆ ನೀನೆಷ್ಟು
ಎನ್ ಈ ಕುತೂಹಲ...
ಛಾವಾಣಿಯ ತುದಿಯಲಿ ನಿಂತು
ಕೂಗಿಹೆನು ನಿನ್ನನು ಇಂತು
ಬೇಡಿಹೆನು ತಂಗಾಳಿಯ ತರಲು ನಿನ ಕಂಪು
ಎನ್ ಈ ಕುತೂಹಲ... "
-vadiraj
ನಾನು
"ನೂರೆಂಟು ಪ್ರಶ್ನೆಗಳ ಗಂಟು
ಹುಡುಕಿಹೆನು ಅದರಲ್ಲಿ ನಿನ್ನ ದಂಟು
ನಿನ್ನ ಕೇಳುವಾಸೆ ಬಹಳಷ್ಟು
ಹೇಳು ಯಾರ್ ಈ ಚೆಲುವೆ ?
ಕಾಣುವೆ ನಾ ನಿನ್ನ ಕವಿತೆಯಲ್ಲಿ
ಕರುಗುತಿರುವೆ ನೀ ಚೆಲುವೆಯ ನೆನೆದಷ್ಟು
ಈ ಗೆಳೆಯರಲ್ಲಿ ಮುಚ್ಚಿಡುವೆ ಇನ್ನೆಷ್ಟು
ಹೇಳು ಯಾರ್ ಈ ಚೆಲುವೆ ?"
Vadi
"ಯಾರಿಲ್ಲ ಗೆಳೆಯ ವಾಸ್ತವದಲ್ಲಿ
ಇರುವಳು ಈ ಚೆಲುವೆ ಕಲ್ಪನೆಯಲ್ಲಿ
ನೂರೆಂಟು ಭಾವನೆಗಳ ಮುಡಿಸುತ ..
ನೂರೆಂಟು ಮೋಹಗಳ ಕಲ್ಪಿಸುತ .. "
Harish
"ಯೋಚಿಸಿದೆ ಯಾಕೆ ಈ ಕವಿಗೋಷ್ಠಿ ಆರಂಬವಾಯಿತೆಂದು …
ಅನಿಸುತಿದೆ ಯಾಕೋ ನಿಮಗೆ ಕೆಲಸವಿಲ್ಲವೆಂದು ….
ಹತ್ತಿದೆ ನನ್ನ ಮನದಲಿ ಬೆಂಕಿ ಇಂದು …..
ಕೇವಲ ನನಗೆ ಯಾಕೆ ಇಷ್ಟು ಕೆಲಸ ವಿರುವುದೆಂದು …"
Girish
"ಮರುಗದಿರು ಗೆಳೆಯ ನಿನ್ನ ಬವಣೆ ಕಂಡು
ನನ್ನ ಬಾಲಕ್ಕೆಕೆ ಲಕ್ಸ್ಮಿ ಪಟಾಕಿ ಎಂದು.....
ಸಂತೈಸಿಕೋ ನಿನ್ನ ಗೆಳೆಯರ ಬಾಲದ ರಾಕೆಟ್ ಕಂಡು....."
Nitin
"ಹುಡುಗಿ ನಿನ್ನ ಎಲ್ಲೇ ಹುಡುಕಲಿ
ನಿನ್ನ ನೆನಪು ಸದಾ ಕಣ್ಣಲಿ
ನೀನಿಲ್ಲದೆ ಹೇಗೆ ಬದುಕಲಿ
ಇರು ನೀ ನನ್ನ ಮನದಲ್ಲಿ
ಇಲ್ಲವಾದರೆ ಹೇಗೆ ಬದುಕಲಿ"
ಈಗ ಮೂಡಿ ಬರಲಿ ನಿಮ್ಮ ಪದಗಳ ಲಹರಿ...
Job search experience
15 years ago
0 ಪ್ರತಿ ದನಿ:
Post a Comment