ತವಕ
ಅವಳ ಕನಸಲ್ಲಿ ನಾಯಕನಾಗುವ ತವಕ
ಅವಳ ಹಾಡಿನ ರಾಗಕ್ಕೆ ಸ್ವರವಾಗುವ ತವಕ
ತವಕ
ಅವಳ ನಡಿಗೆಯಲ್ಲಿ ಕೈ ಹಿಡಿದು ಜೊತೆಯಾಗುವ ತವಕ
ಅವಳ ತುಟಿಯಂಚಿನ ಕಿರುನಗೆಗೆ ಕಾರಣವಾಗುವ ತವಕ
ತವಕ
ಮೊದಲ ಮಾತಿನಲ್ಲಿ ಅವಳ ಮೌನ ಕಸಿಯುವ ತವಕ
ಅವಳ ತವಕದಲ್ಲಿ ಮೂಡಿ ಬಂದ ಕವಿತೆ ತಂದಿದೆ ಎಂಥಹ ಪುಳಕ!
Job search experience
15 years ago
0 ಪ್ರತಿ ದನಿ:
Post a Comment