ಅಬ್ಬಾ ಎಷ್ಟೊಂದು ತಿಂಗಳಾಯ್ತು ಈ ಬ್ಲಾಗ್
ಬರಿದೆ.. ಇವತ್ತು ಏನೋ ಒಂದು ತರ ಮಜಾ
ಅನಿಸ್ತ ಇದೆ ಬರಿಯೋಕ್ಕೆ.. ಹೊಸ ಪುಸ್ತಕ ತಗೊಂಡಾಗ ಅದರ ಮೊದಲ ಹಾಳೆ ಮೇಲೆ ಬರೆಯುವಾಗ
ಒಂದು ರೋಮಾಂಚನ ಆಗುತ್ತಲ್ಲ ಆ ರೀತಿ.. ನಾನು ಬರೆದಿರೋ ಹಳೆ ಕವಿತೆಗಳನ್ನ ಓದಿದರೆ ನಾನೇ
ಬರದಿದ್ದ ಅಂತ ಅನುಮಾನ ಬರುತ್ತೆ.. ಪೂರ್ತಿ ಆಗದೆ draft ಆಗೇ ಉಳಿದ ಕವಿತೆಗಳನ್ನ
ಒಂದೇ ಉಸಿರಲ್ಲಿ ಪೂರ್ತಿ ಮಾಡಲ ಅನಿಸುತ್ತೆ... ಹೇಳದೆ ಉಳಿದ ಎಷ್ಟೋ ವಿಷಯಗಳನ್ನ ಒಂದೇ
ಸಮ ಹೇಳಬೇಕು ಅನಿಸುತ್ತೆ.. ಆದರೆ ಬರಿಬೇಕು ಅಂತ ಕೂತಾಗ ಮನಸ್ಸು ಖಾಲಿ ಖಾಲಿ..ನನ್ನ
ಪದಗಳ ಬಂಧ ಮುಗಿಯಿತ ಅಂತ ಬೇಜಾರ್ ಆಗುತ್ತೆ.. ನಮಗೆ ತುಂಬಾ ಕ್ಲೋಸ್ ಆಗಿದ್ದ ಫ್ರೆಂಡ್ ಬಹಳ ದಿವಸದ ಮೇಲೆ ಸಿಕ್ಕಾಗ ಮೌನನೆ
ಹೆಚ್ಚು ಮಾತಾಗಿರುತ್ತೆ ಹಾಗೆ..
ಇರಲಿ
ನಾನು ಈಗ ಬರಿಯೋಕ್ಕೆ ಹೊರಟಿದ್ದು ಇತ್ತೀಚಿಗೆ ನಾನು ಓದಿದ ಒಂದು ಪುಸ್ತಕದ
ಬಗ್ಗೆ, ಪುಸ್ತಕದ ಹೆಸರು 'ಕರಿಸಿರಿಯಾನ '. ಒಂದು ಅದ್ಬುತ ಪುಸ್ತಕ.. ಇದಕ್ಕೆ ಕಥೆಗಿಂತ
ಸಂಶೋಧನೆ ಎಂದರೆ ಹೆಚ್ಚು ಸೂಕ್ತ. ಈ ಪುಸ್ತಕದಲ್ಲಿ ಕೊಡುವ ಹೆಚ್ಚು ವಿವರಗಳು ಸತ್ಯ!
ನಮಗೆಲ್ಲ
ತಿಳಿದಿರುವ ಹಾಗೆ ಹಂಪಿಯ ವಿಜಯನಗರ ಸಾಮ್ರಾಜ್ಯದಲ್ಲಿ ಇದ್ದ ಅಪೂರ್ವ ವಜ್ರ
ವೈಡುರ್ಯಗಳು. ನಾವು ಕೇಳಿರುವ ಹಾಗೆ ಆಗಿನ ಕಾಲದಲ್ಲಿ ಬಂಗಾರವನ್ನ ರಸ್ತೆಯಲ್ಲಿ
ವ್ಯಾಪಾರ ಮಾಡುತಿದ್ದರು. ನಾವು ಹಂಪಿಗೆ ಹೋದಾಗ ಇಲ್ಲಿ ಎಲ್ಲಾದರು ಗುಂಡಿ ತೋಡಿದರೆ ನಮಗೆ ಒಂದು ಚೂರು ಬಂಗಾರ ಸಿಗಬಹುದ ಅಂತ
ಅನಿಸಿರುತ್ತೆ. ಹಾಗಾದರೆ ವಿಜಯನಗರ ಸಾಮ್ರಾಜ್ಯ ನಾಶವಾದ ಮೇಲೆ ಅಷ್ಟೂ ಸಂಪತ್ತು/ನಿಧಿ
ಎಲ್ಲಿಗೆ ಹೋಯಿತು? ಇದರ ಹುಡುಕಾಟವೇ ಈ ಪುಸ್ತಕ. ಲೇಖಕ ಕೆ ಏನ್ ಗಣೇಶಯ್ಯ ಅವರು ಒಬ್ಬ ವಿಜ್ಞ್ಯನಿಯು(Agricultural scientist) ಹೌದು. ಅವರ
ಸಂಶೋಧನೆಯನ್ನ ಒಂದು ಕಥೆಯ ಮುಖಾಂತರ ಹೇಳಲು ಹೊರಟು ಕೊನೆಗೆ ಸಂಶೋಧನೆಗೆ ಸಹಕರಿಸಿದವರೇ ಕಥೆಯ ಪಾತ್ರಧಾರಿಗಳಾಗುತ್ತಾರೆ.
ಪುಸ್ತಕದಲ್ಲಿ
ಬರುವ ಕೆಲವು ರೋಚಕ ವಿಷಯಗಳನ್ನ ಇಲ್ಲಿ ಹೇಳಲೇಬೇಕು. ವಿಜಯನಗರ ಸಾಮ್ರಾಜ್ಯ ನಾಶವಾದ ಮೇಲೆ
ಕೃಷ್ಣ ದೇವರಾಯನ ಅಳಿಯ ರಾಮ ರಾಯ ೧೫೦೦ ಆನೆಗಳ ಮೇಲೆ ರಾಜ್ಯದ ಸಂಪತನ್ನ ಸಾಗಿಸುತ್ತಾನೆ.
ಅದರಲ್ಲಿ ಕನಿಷ್ಠ ೫೦೦ ಆನೆಗಳ ಮೇಲೆ ನಿಧಿಯನ್ನ ಸಾಗಿಸಿರಬಹುದು. ಒಂದು ಆನೆಯ ಮೇಲೆ ೧
ಟನ್ ವಜ್ರ ವೈಡುರ್ಯ ಇತ್ತು ಅಂದುಕೊಂಡರು ಇನ್ನು ೫೦೦ ಆನೆಗಳ ಮೇಲಿದ್ದ ಸಂಪತ್ತು
ಅದಿನ್ನೆಷ್ಟು ಇರಬಹುದು!!
ಹಾಗಾದರೆ ವಿಜಯನಗರ
ಸಾಮ್ರಾಜ್ಯ ಹೇಗೆ ನಡೆಯುತ್ತಿತ್ತು? ಆಮೇಲೆ ಹೇಗೆ ನಾಶವಾಯಿತು? ಆ ನಂತರ ನಿಧಿಗಾಗಿ ಯಾರೆಲ್ಲ ಹೊಡೆದಾಡಿದರು? ಆ ನಿಧಿ
ಈಗಲು ಇರಬಹುದೇ? ಆ ನಿಧಿಯನ್ನ ಕೊನೆಗೆ ಎಲ್ಲಿ ಸಂರಕ್ಷಿಸಿದರು? ನಿಧಿ ಇಡುವ ಜಾಗದ
ಮಾಹಿತಿಯನ್ನ ಆ ಕಾಲದಲ್ಲಿ ಪೂರ್ವ ಆಲೋಚನೆಯಾಗಿ ಹೇಗೆ ಕಾಪಾಡಿ ಕೊಂಡು ಬಂದಿದ್ದರು?
ಈಗಿರುವ ತಿರುಪತಿ ಅಷ್ಟೊಂದು ಪ್ರಸಿದ್ಧಿ ಮತ್ತು ಶ್ರೀಮಂತ ಹೇಗಾಯಿತು?
ತಿರುಪತಿಯಲ್ಲಿರುವ ದೇವರು ನಿಜವಾಗಲು ತಿಮ್ಮಪನೆ ಎನ್ನುವ ಅನುಮಾನ? ಹಂಪಿ ನಗರದ
ರಚನೆಯಲ್ಲೇ ಅವರು ಹೇಗೆ ಕೆಲವು ಮಾಹಿತಿಗಳನ್ನ ಇಟ್ಟಿದ್ದರು? ಇದೆಲ್ಲದಕ್ಕು ಉತ್ತರ
interesting... ಎಲ್ಲದಕ್ಕೂ ಉತ್ತರ ಇಲ್ಲಿ ಹೇಳುವುದು ಸೂಕ್ತ ಅಲ್ಲ, ಆದ್ದರಿಂದ ಕೆಲವು
ವಿಷಯಗಳನ್ನ ಮಾತ್ರ ಹಂಚಿಕೊಳ್ತೀನಿ.
ಕಥೆಯ ಸಾರಾಂಶ(ಪುಸ್ತಕದ ಹಿಂದೆ ಕೊಟ್ಟಿರುವ ಹಾಗೆ): ಕಾಶ್ಮೀರದ ಎತ್ತರದ ಮಂಜು ಪ್ರದೇಶದಲ್ಲಿ Alexanderನ ಸೈನ್ಯದ ಜೊತೆ ಬಂದ ಗ್ರೀಕ್ ದೇಶದವರೆನ್ನಲಾದ ಒಂದು ಜನಾಂಗದ ಜಾನಪದ ಪದ್ಧತಿಗಳ ಅಧ್ಯಯನದಲ್ಲಿ ತೊಡಗಿದ್ದ ಯುವ ಸಂಶೋಧಕಿ ಭಾವನಾಳನ್ನು ಭಾರತದ ಸೈನ್ಯವು ಹಟಾತ್ತನೆ ಸೆರೆ ಹಿಡಿದು ಹೊತೋಯುತ್ತದೆ. ಅದೇ ವೇಳೆಗೆ, ಅಕಸ್ಮಾತ್ ಆಗಿ ದೊರಕಿದ ಹಂಪಿಯ ನಾಡು ಜನರ, ಜಾನಪದ ನಂಬಿಕೆಯೊಂದರ ಬೆನ್ನು ಹತ್ತಿ ತಿರುಪತಿಯ ಬೆಟ್ಟಗಳಲ್ಲಿ ರಹಸ್ಯವೊಂದನ್ನು ಅರಸಿ ಹೊರಟಿದ್ದ ಪೂಜಾಳನ್ನು ಸಿ.ಬಿ.ಐ ಬಂಧಿಸಿ ಕರೆದೊಯುತ್ತದೆ. ತಾವು ಈ ಸೆರೆಯಿಂದ ಮುಕ್ತಿ ಹೊಂದುವ ಪ್ರಯತ್ನದಲ್ಲಿ ಇಬ್ಬರು ಕಂಡುಕೊಳ್ಳುವ ಚರಿತ್ರೆಯ ರಹಸ್ಯಗಳು, ವಿಜಯನಗರ ಕಾಲದ ಧರ್ಮ, ರಾಜಕೀಯದ ಸುತ್ತ ಬೆಳೆದ ಅಗಾಧ ನಿಧಿಯ ಸತ್ಯದತ್ತ ಕೆರೆದೊಯುತ್ತದೆ. ಆ ನಿಧಿಯ ಹುಡುಕಾಟವೇ ಕರಿಸಿರಿಯಾನ!
ನಿಧಿ ಇರುವ
ಜಾಗದ ಮಾಹಿತಿಯನ್ನ ಜಾನಪದ ಹಾಡಿನಲ್ಲಿ encodeಮಾಡಿ ಇಡುತಿದ್ದರು. ಈ ಹಾಡುಗಳನ್ನ
ಕಾಡಿನಲ್ಲಿ ವಾಸಿಸುವ ಗಿರಿ ಜನರು ಅಥವಾ ಹೆಳವರ ಜನಾಂಗದ ಮುಖ್ಯಸ್ತ ಮಾತ್ರ ರಾಜರ ಮುಂದೆ
ಹಾಡುತಿದ್ದ ಮತ್ತು ಹಾಡುವಾಗ ಮೈ ಮೇಲೆ ಒಂದು ಚರ್ಮದ ಕವಚವನ್ನ ಹಾಕಿಕೊಂಡು ಕೆಲವು
ಭಂಗಿಗಳನ್ನ ಮಾಡುತ್ತಾ ಹಾಡುತಿದ್ದ. ಆ ಜಾನಪದ ಹಾಡು, ಕವಚದ ಮೇಲಿನ ನಕ್ಷೆ ಮತ್ತು ಅವನ
ಭಂಗಿಯನ್ನ decode ಮಾಡಿದರೆ ನಿಧಿ ಇರುವ ಜಾಗ ತಿಳಿಯುತ್ತಿತ್ತು!!! ಜನಾಂಗದ ಮುಖ್ಯಸ್ತ
ತಾನು ಸಾಯವಾಗ ತನ್ನ ಮುಂದಿನ ಮುಖ್ಯಸ್ತನಿಗೆ ಹೇಳಿಕೊಡುತಿದ್ದ. ಹೀಗೆ ಅದರ ರಹಸ್ಯವನ್ನ
ವರ್ಷಗಳ ಕಾಲ ಕಾಪಾಡಿ ಕೊಂಡು ಬಂದಿದ್ದರು. ನಿಧಿಯನ್ನ ಕೊನೆಗೆ ಎರಡು ಸ್ಥಳಗಳಲ್ಲಿ
ಮುಚ್ಚಿಡುತ್ತಾರೆ ಒಂದು ಹಂಪಿಯ ಹತ್ತಿರ ಇನ್ನೊಂದು ತಿರುಪತಿಯ ಹತ್ತಿರ.
ಹಾಗಾದರೆ ನಿಧಿ ಇರುವ ಜಾಗ ಹೇಗೆ
ಸಿಗುತ್ತೆ? ಆ ಜಾನಪದ ಹಾಡನ್ನ ಹೇಗೆ ಬಿಡಿಸುತ್ತಾರೆ? ಮತ್ತು ಮುಂಚೆ ಹೇಳಿದ ಎಲ್ಲ
ಪ್ರಶ್ನೆಗಳಿಗೆ ಉತ್ತರ ಪುಸ್ತಕದಲ್ಲಿ ಸಿಗುತ್ತದೆ. ಈಗ ನಿಮ್ಮ ಮನಸ್ಸಿನಲ್ಲಿ ಹಂಪಿ
ವಿಜಯನಗರ ಸಾಮ್ರಾಜ್ಯದ ನಿಧಿಯ ಬಗ್ಗೆ ಒಂದು ಸಣ್ಣ ಕುತೂಹಲ ಮೂಡಿದರೆ ನನ್ನ ಈ ಬರಹ
ಸಾರ್ಥಕ...
0 ಪ್ರತಿ ದನಿ:
Post a Comment