CLICK HERE FOR THOUSANDS OF FREE BLOGGER TEMPLATES »

Watch Lucia Movie online with English subtitles

Friday, 19 June 2009

ನಾ ಕವಿ-17

ದೇವಸ್ಥಾನದ ಘಂಟೆಯ ಮೇಲಿನ ಹೆಸರಿನಂತಾಗದಿರಲಿ
ಕಲ್ಪನೆಯ ಕಣ್ಣಿನಲ್ಲಿ ವಾಸ್ತವ ಮರೆತು ಕಣ್ಣೀರಾಗದಿರಲಿ
ಕಷ್ಟಗಳನ್ನು ತೊರೆದು ಸದಾ ಹರಿಯುವ ನೀರಿನಂತಾಗಲಿ
ನಾಳೆಯ ಬಯಕೆಯಲ್ಲಿ ಭರವಸೆ ಬರಸುವುದೇ ಬದುಕು
ಇದ ಅರಿತು ನೀ ಬದುಕು, ಜನ್ಮ ದಿನದ ಶುಭಾಶಯಗಳು!


Dedicated to my sister on her Birthday

Sunday, 14 June 2009

ಪ್ರೀತಿ ನಿವೇದನೆ - ಒಂದು ಕಲ್ಪನೆ

ಹಾಯ್ ಹೇಗಿದ್ದೀಯ, ಮನೆಯಲ್ಲಿ ಎಲ್ಲಾ ಹೇಗಿದ್ದಾರೆ, ನಾನು ಆರಾಮ್(?), ಅಂತೆಲ್ಲಾ ಕೇಳಿ ನಿನ್ನ ಬೋರ್ ಹೊಡ್ಸೆಲ್ಲಾ. ಸೀದಾ ವಿಷಯಕ್ಕೆ ಬರ್ತೀನಿ. ಯಾಕೆ ಬರಲಿಲ್ಲ ನಮ್ಮ ಮಾಮೂಲ್ ಜಾಗಕ್ಕೆ? ಏನಾಯ್ತು ಇವತ್ತು ನಿಂಗೆ? ನಾವು ದಿವಸ ಕೈ ಹಿಡಿದು ಓಡಾಡ್ತಾ ಇದ್ದ ಸರ್ವಿಸ್ ರೋಡ್ ಇವತ್ತು ಎಷ್ಟು ಖಾಲಿ ಖಾಲಿ ಗೊತ್ತಾ ನನ್ನ ಹೃದಯದ ಹಾಗೆ. ಚಾಹದ ಅಂಗಡಿ ಹುಡುಗ ನನ್ನ ನೋಡಿ ಕೊಟ್ಟ ಕಿರು ನಗೆಯಲ್ಲಿ, ಎಲ್ಲಿ ಇವತ್ತು ನಿನ್ನವಳು? ಅನ್ನೊ ಪ್ರಶ್ನೆ ಅಡಗಿತ್ತು. ನಾನು ಅವತ್ತು ನಿನಗಾಗಿ ನೋಡಿದ ಆಕಾಶ ನೀಲಿ ಸೀರೆ, ಅದುನ್ನ ಉಟ್ಟಾ ಪ್ಲಾಸ್ಟಿಕ್ ಸುಂದರಿ ಅವತ್ತು ಹೊಟ್ಟೆ ಉರಿ ಪಟ್ಟವಳು ಇವತ್ತು ಸೇಡು ತೀರುಸ್ಕೊಂಡೆ ಅಂತ ಖುಷಿ ಇಂದ ಬೀಗ್ತ ಇದ್ದಳು. ಭಾನುವಾರ ಬೆಳಗಿನ ಸಕ್ಕರೆ ನಿದ್ದೆ ನಂತರ ಕುಡಿಯಲು ಅಂತ ನಾವು ಆರಿಸಿಟ್ಟ ಕಪ್ಪು ಸಾಸರ್ ಮರುಕದಿಂದ ನೋಡ್ತಾ ಇತ್ತು. ಮಲಗುವ ಮುಂಚೆ ಓದಲು ಅಂತ ಆರಿಸಿಟ್ಟ ಪುಸ್ತಕದ ಅಕ್ಷರಗಳು ಪ್ರಶ್ನಾರ್ತಕ ಚಿನ್ಹೆ ಆಗಿ ಕಾಡ್ತಾ ಇವೆ. ಏನ್ ಅಂತ ಹೇಳಲಿ ಇವರಿಗೆಲ್ಲ, ಹೇಳಿ ಹೋಗು ಕಾರಣ. ಅವರಂತೆ ಇವತ್ತು ನನ್ನ ಮನಸ್ಸೇ ನನಿಗೆ ಪ್ರಶ್ನೆ ಹಾಕಿದೆ. ನನ್ನ ಒಬ್ಬಂಟಿ ಬದುಕಲ್ಲಿ ನೆರಳಾಗಿ ಜೊತೆಯಾಗಿ ಬಂದೆ. ನೆರಳ ಜಾಡು ಹಿಡಿದು ನಾನು ನಿನ್ನ ನೋಡೋ ಅಷ್ಟ್ರಲ್ಲಿ ಎಲ್ಲಿಗೆ ಕಾಣೆ ಆದೇ?

ಯಾವಾಗಲು ಕರೆಕ್ಟ್ ಟೈಮ್ಗೆ ಬಂದು, ಭೇಟೆಯಾದ ಕೊಡಲೆ ಒಂದೇ ಉಸಿರಲ್ಲಿ ಅವತ್ತು ನಡೆದದ್ ಎಲ್ಲಾ ಒಪ್ಪುಸ್ಕೊಂಡು. ಒಬ್ಬರಿಗೊಬ್ಬರು ನೆನಸಿಕೊಂಡ ಕ್ಷಣಗಳು, ಹಾಡಿದ ಮೌನ ಗೀತೆಗಳು, ಮನದ ಮೂಲೆಯಲ್ಲಿ ಕಂಡ ನಿನ್ನ ಝಲಕ್, ಕಂಪ್ಯೂಟರ್ ಮೌಸ್ ನಲ್ಲಿ ಸವಿದ ನಿನ್ನ ಕೈ ಬಿಸಿ, ನಿನ್ನ ಇರುವಿಕೆಗಾಗಿ ಹಪಹಪಿಸಿದ ಘಂಟೆಗಳು ಎಲ್ಲ ಹೇಳ್ಕೊಳ್ತಾ ಇದ್ವಿ. ಭೇಟಿಯಾಗೊ ಮುಂಚೆ ಒಬ್ಬರಿಗೊಬ್ಬರು sms ಆಗಲಿ, ಫೋನ್ ಆಗಲಿ, -ಮೇಲ್ ಆಗಲಿ ನಿಷಿದ್ದ. ಭೇಟಿ ಆಗೋ ಮುಂಚೆ ನಮ್ಮ ನಮ್ಮ ಜಗತಿನಲ್ಲಿ ಇದ್ದು, ಸಿಕ್ಕ ಕೂಡಲೇ ಇಬ್ಬರದು ಒಂದೇ ಜಗತ್ತು ಅಂತ ನಮಗೆ ನಾವೇ ಮಾಡಿಕೊಂಡ ನಿರ್ಧಾರ ಮರೆತು ಹೋಯ್ತಾ!. ಏಕೆಂದರೆ ನಮಗೆ ಪ್ರೀತಿ ಆರಾಧನೆಯಲ್ಲ, ಚಡಪಡಿಕೆಯಲ್ಲ, ದುಗುಡ ಅಲ್ಲ. ಅದು ಬೆಚ್ಚಗಿನ, ಅಕ್ಕರೆಯ, ಒಲವಿನ ಸ್ನೇಹ.

ಬೆಳದಿಂಗಳ ಬೆಳಕಲ್ಲಿ ಇಬ್ಬರು ಕೈ ಹಿಡಿದು ನಡೆದ ದೂರಗಳೆಷ್ಟೋ! ನಮ್ಮ ನಡಿಗೆಯಲ್ಲಿ ಮಾತಿಗಿಂತ ಮೌನಕ್ಕೆ ಜಾಸ್ತಿ ಜಾಗ, ಮೌನದಲ್ಲಿ ಹಂಚಿಕೊಂಡ ಭಾವನೆಗಳೆಷ್ಟೋ! ನನ್ನ ಕಣ್ಗಲ ತುಂಟ ಪ್ರಶ್ನೆಗಳಿಗೆ ನಿನ್ನ ಕಿರು ನಗೆಯೆ ಉತ್ತರ. ಸೂರ್ಯನ ಕಿರಣಗಳ ಸ್ಪರ್ಶಕ್ಕೆ ಬಳ್ಳಿ ಹೂ ನೀಡಿ ಉತ್ತರಿಸುವಂತೆ. ನಮ್ಮ ನಡುವೆ ಇದ್ದ ಮೌನ, ಪ್ರೀತಿ ಬಲಿತ ನಂತರದ ಅಥವಾ ಪ್ರೀತಿ ಹುಟ್ಟುವ ಮೊದಲಿನ ಮೌನವ ಅಂತ ಇಂದು ಸಂದೇಹ ಆಗ್ತಾ ಇದೆ ಕಣೆ!. ನೀನು ಹೇಗಿದ್ದೀಯ, ಹೇಗೆ ಕಾಣ್ತೀಯ, ನಿನ್ನ ಇರುವಿಕೆಯ ಒಂದು ಅತಿ ಚಿಕ್ಕ ಸುಳಿವು ಇಲ್ಲದೇ ಸುಮ್ಮನೆ ಇಷ್ಟು ದಿವಸ ಕೈಹಿಡಿದು ನಡೆದೇ, ನನ್ನ ಎಲ್ಲಾ ಭಾವನೆಗಳನ್ನ ಹೇಳಿಕೊಂಡೆ. ಇವತ್ತು ನನ್ನ ನೆರಳು ಕೂಡ ನನ್ನಷ್ಟೇ ಒಂಟಿ ಒಂಟಿ. ಇಷ್ಟು ದಿವಸ ನನ್ನ ಕನಸಲ್ಲಿ ಬರ್ತಾ ಇದ್ದಿ ಇಷ್ಟೆಲ್ಲಾ ಮಾಡ್ತಾ ಇದ್ವಿ ಆದರೆ ಇವತ್ತು ಯಾಕೆ ನನ್ನ ಕನಸಲ್ಲಿ ಬರಲಿಲ್ಲ ನೀನು? ನಮ್ಮ ಪ್ರೀತಿಯ ಆಯಸ್ಸು ಇಷ್ಟೇನಾ? ವಾಸ್ತವದಲ್ಲಿ ಪ್ರೀತಿಗೆ ಮೋಸ ಆಗುತ್ತೆ ಅಂತ ಕೇಳಿದ್ದೆ ಆದರೆ ನಂಗೆ ಕನಸಲ್ಲು ಮೋಸಾನ:( . ಸರಿ ಚಂದ್ರ ಗಾಢ ನಿದ್ರೆಗೆ ಹೋಗುವ ಮುಂಚೆ, ಸೂರ್ಯ ಹಾಯ್ ಹೇಳುವ ಮೊದಲು ಬೇಗ ಬಂದು ಬಿಡು ಇವತ್ತು . ಕಾಯ್ತಾ ಇರ್ತೀನಿ...

Saturday, 16 May 2009

ನಾ ಕವಿ-16

ಭೂಮಿ ಸೂರ್ಯನ ಹಿಂದೆ ಸುತ್ತುವಂತೆ
ಆ ಪ್ರೀತಿ ಈ ಪ್ರೀತಿ ಎಂದು ಸುತ್ತಬೇಡ...
ಭೂಮಿ ತನ್ನ ಸುತ್ತಲು ತಿರುಗಿ ಹಗಲ್ ಇರುಳು ಕಾಣುವಂತೆ
ಬಾಳ ಹೋರಾಟದಲ್ಲಿ ನಿನಗೆ ನೀ ಇಷ್ಟವಾಗುವುದೇ ಮೊದಲ ಪ್ರೀತಿ...

Inspired by Vadi's Poem


From: rudresh angadi
Sent: Tuesday, May 19, 2009 12:54 PM
To: harsha
Subject: Re: Naa kavi-16


good :)


From: Mahantesh s. Ajjampurshetru
Sent: Tuesday, May 19, 2009 2:06 PM
To: harsha
Subject: RE: Naa kavi-16

ಏನೋ ಇದು ವಿಜ್ಞಾನ ನೆ ಬದ್ಲುಸ್ತಿಯೆಲ್ಲ

ಭೂಮಿ ಸೂರ್ಯನ ಹಿಂದೆ ಸುತ್ತೊಲ್ಲ; ಸೂರ್ಯನ ಸುತ್ತ ಸುತ್ತೋದು



ಭೂಮಿ ತನ್ನ ಸುತ್ತಲು ತಿರುಗಿ!!! ಏನ್ ಇದು?

ಭೂಮಿ ತಿರುಗಿ ಹಗಲಿರುಳು ಕಾಣುವಂತೆ ಸಾಕು ಅನ್ಸತ್ತೆ

From: harsha [mailto:harsha.mp@thoughtfocus.com]
Sent: Tuesday, May 19, 2009 2:15 PM
To: Mahantesh s. Ajjampurshetru
Subject: RE: Naa kavi-16



ha ha thank u thank u....khushi aytu....

'hinde' atava 'sutta sutodu' eradu onde.. e context alli....

naavu hudugira hinde suttane... atva hudgira sutta irtane andre eradu onde arta kodutte... a reeti idu...

"Bhoomi tanna suttalu tirugi" illi nannu ninna neenu modlu nodko anta helbeku.. adukke e line stress kodutte...

"Bhoomi tirugi" andaga ashtu stress kotange agodilla... bashantarya dalli neenu heliddu correctu.. swalpa stress kododukke oskara a line bekaytu...

From: Nitin.Kulkarni
Sent: Tuesday, May 19, 2009 1:13 PM
To: harsha; 'Harish C'; anoop.chandrachar@wipro.com; VadirajP.Kadur; Santosh.Shet
Subject: RE: ?????? ???????????

Ishta ella bardi Magana but this is superb!!!!!!!!!

Monday, 27 April 2009

ನಾ ಕವಿ-15

ಎಲ್ಲಿ ಹೋದೆ?
ಮನದ ಜನಸಂದಣಿಯಲ್ಲಿ ಹಿಡಿದ ಕೈ ಬಿಟ್ಟು
ನೆನಪುಗಟ್ಟಿ ನರಳುವಾಗ ಉಸಿರಾಗಿ ನಿಲ್ಲದೇ

ಎಲ್ಲಿ ಹೋದೆ?
ಭಾವನೆಗಳ ಅವುಡುಗಚ್ಚಿ ಮಲಗಿದಾಗ ಕನಸುಗಳ ಬಿಟ್ಟು
ಎದೆಯ ಆಳದಲ್ಲಿ ಕೈಗೆಟುಗದಷ್ಟು ದೂರ ನಡೆದು

ಎಲ್ಲಿ ಹೋದೆ?
ಒಲವೆ ನನ್ನ ಬಿಟ್ಟು, ಕಾಯುವೆ ನನ್ನೊಳಗೆ ಮಡಿದ ಕವನವಾಗಿ!

Anoop's comments:

Aelli hoode?
----------------------------
----------------------------
Heege hoode?
---------------------------
---------------------------
Aeeke hoode?
Olave nanna bittu…jote goodi kaleda madhura kshanagala maretu..
Heluvenu ondu maatu kadeyadaagi…
kaayuve nannolage ninagaagi….. madida kavanavaagi…..

From: R, Jyothi
Sent: Tuesday, May 05, 2009 1:50 PM
To: harsha
Subject: RE: Naa kavi-15


Hey its really nice…. U r only writing all these are got from some wer… ha…?

From: Harish C
Sent: Tuesday, May 05, 2009 2:07 PM
Cc: 'ajith'; 'girya'; 'kempya'; 'mama'; 'mulla'; 'nitin'; 'vadi'
Subject: RE: Naa kavi-15


Kaviraaja avarige namma namana…. Aadre AVUDUGACCHI andre enu antha helbekaagi vinanthi…


From: rudresh angadi
Sent: Tuesday, May 05, 2009 2:15 PM
To: harsha
Subject: Re: Naa kavi-15


good one :)

Keep up :)

Wednesday, 22 April 2009

ನಾ ಕವಿ-14

Thought let me take break from long poems and start writing short ones...
I know it may not be upto expectation, but somewhere I should start..
so from here it is...


ನೀ ಬಂದೆ, ನನ್ನ ಮನದ ತುಂಬ ನಿನ್ನ ಆಸೆಯ ತಂದೆ
ಆಸೆಯ ಸವಿಯುತ, ಆಸೆಯ ತಂದ ನಿನನ್ನೆ ಮರೆತೆ
ಮರೆತ ತಪ್ಪಿಗೆ, ಮರೆಯಲ್ಲಿ ಮೂಡಿದ ಈ ಕವಿತೆಯ ತಂದೆ



From: anoop.chandrachar
Sent: Wednesday, April 22, 2009 1:51 PM
To: harsha.mp@thoughtfocus.com
Subject: RE: Naa kavi-14


Not Good!!!

Poem aenu helta ella… no feeling at all……

Aase means what from the poem point of view???

From: Shivalingaiah, Kiran
Sent: Wednesday, April 22, 2009 2:16 PM
To: harsha
Subject: RE: Naa kavi-14


Hehehe… gud one J


Friday, 10 April 2009

ನಾ ಕವಿ-13

ಏನೋ ಕಳವಳ..!
ಹೆಂಡತಿಯೊಡನೆ ವಿರಸ ನೆನೆದು ಗಂಡ ಪಡುವ ಕಳವಳದಂತೆ
ಪ್ರೇಮನಿವೇದನೆ ನಂತರ ಹುಡುಗ ಪಡುವ ಕಳವಳದಂತೆ

ಏನೋ ಕಳವಳ..!
ಪ್ರೀತಿಸಿದ ಮನಸ್ಸಿನ ಮೌನ ಮಾತಾಗದಾಗ ಮೂಡುವ ಕಳವಳದಂತೆ
ಕಂಡ ಕನಸ್ಸು ಕಾಲದಲ್ಲಿ ಕಾಣೆಯಾದಾಗ ಕಾಡುವ ಕಳವಳದಂತೆ

ಏನೋ ಕಳವಳ..!
ಕವಿತೆ ಬರೆವ ನನ್ನ ಕಳವಳ ಕಂಡು ಕವಿತಾ ಬಂದಾಗ
ಬರೆಯಬೇಕೋ ಬಿಡಬೇಕೋ ಎಂಬ ಕಳವಳ

From: R, Jyothi
Sent: Tuesday, April 14, 2009 3:18 PM
To: harsha
Subject: RE: Naa kavi-13


So wat is the final conclusion now….?


Thursday, 2 April 2009

ನಾ ಕವಿ-12

Poem on a 'Poem'

ಎನಿತು ಚೆಂದ ಕವಿತೆ...
ಮನದ ತೊದಲ ಮಾತ ಗೀಚುವ ಬಳಪದಂತೆ
ಪುಟಿಯುವ ಬಾವನೆಗಳ ಪೋಣಿಸುವ ವ್ಯಾಕರಣದಂತೆ

ಎನಿತು ಚೆಂದ ಕವಿತೆ...
ಏಕಾಂಗಿ ಹೃದಯಕ್ಕೆ ಸಾತ್ ನೀಡಿ ಹೋಗುವ ಅಲೆಯಂತೆ
ಗೊಂದಲ ಬದುಕಿಗೆ ಅರಿವಾಗುವ ಆತ್ಮಪ್ರಜ್ಞೆಯಂತೆ

ಎನಿತು ಚೆಂದ ಕವಿತೆ...
ಕವಿತೆಯ ಮೆಚ್ಚಿಸಲು ಕವಿಯಾಗಿ ಕಂಡ ಕವಿತೆಯ ಒಲವೆ ಚೆಂದ


From: rudresh angadi
Sent: Friday, April 03, 2009 2:53 PM
To: harsha
Subject: Re: Naa Kavi-12


good one :)

From: VadirajP.Kadur
Sent: Friday, April 03, 2009 2:56 PM
To: harsha
Cc: Nitin.Kulkarni; 'Pavan'; 'Milind halageri'; 'Girish Revadigar'; harish.c@patni.com
Subject: RE: Naa Kavi-12


Cool man!! Awesome!! Nice usage of words.

Last line just gone pass over the head. Phewww….just like that.

Please shed some light on the underlying meaning

From: Halageri, Milind Indiresh
Sent: Friday, April 03, 2009 3:32 PM
To: VadirajP.Kadur; harsha
Cc: Nitin.Kulkarni; Pavan; Girish Revadigar; harish.c@patni.com
Subject: RE: Naa Kavi-12

Cholo bardipa mulla adra swalpa mistakes adavu

bavane alla bhavane
saat alla saath

From: Harish C
Sent: Friday, April 03, 2009 3:36 PM
To: 'VadirajP.Kadur'; 'harsha'
Cc: 'Nitin.Kulkarni'; 'Pavan'; 'Milind halageri'; 'Girish Revadigar'
Subject: RE: Naa Kavi-12


Ha haha..4 me too…Phewww.w..w.w.w..w