ಹಾಯ್ ಹೇಗಿದ್ದೀಯ, ಮನೆಯಲ್ಲಿ ಎಲ್ಲಾ ಹೇಗಿದ್ದಾರೆ, ನಾನು ಆರಾಮ್(?), ಅಂತೆಲ್ಲಾ ಕೇಳಿ ನಿನ್ನ ಬೋರ್ ಹೊಡ್ಸೆಲ್ಲಾ. ಸೀದಾ ವಿಷಯಕ್ಕೆ ಬರ್ತೀನಿ. ಯಾಕೆ ಬರಲಿಲ್ಲ ನಮ್ಮ ಮಾಮೂಲ್ ಜಾಗಕ್ಕೆ? ಏನಾಯ್ತು ಇವತ್ತು ನಿಂಗೆ? ನಾವು ದಿವಸ ಕೈ ಹಿಡಿದು ಓಡಾಡ್ತಾ ಇದ್ದ ಸರ್ವಿಸ್ ರೋಡ್ ಇವತ್ತು ಎಷ್ಟು ಖಾಲಿ ಖಾಲಿ ಗೊತ್ತಾ ನನ್ನ ಹೃದಯದ ಹಾಗೆ. ಆ ಚಾಹದ ಅಂಗಡಿ ಹುಡುಗ ನನ್ನ ನೋಡಿ ಕೊಟ್ಟ ಆ ಕಿರು ನಗೆಯಲ್ಲಿ, ಎಲ್ಲಿ ಇವತ್ತು ನಿನ್ನವಳು? ಅನ್ನೊ ಪ್ರಶ್ನೆ ಅಡಗಿತ್ತು. ನಾನು ಅವತ್ತು ನಿನಗಾಗಿ ನೋಡಿದ ಆಕಾಶ ನೀಲಿ ಸೀರೆ, ಅದುನ್ನ ಉಟ್ಟಾ ಆ ಪ್ಲಾಸ್ಟಿಕ್ ಸುಂದರಿ ಅವತ್ತು ಹೊಟ್ಟೆ ಉರಿ ಪಟ್ಟವಳು ಇವತ್ತು ಸೇಡು ತೀರುಸ್ಕೊಂಡೆ ಅಂತ ಖುಷಿ ಇಂದ ಬೀಗ್ತ ಇದ್ದಳು. ಭಾನುವಾರ ಬೆಳಗಿನ ಸಕ್ಕರೆ ನಿದ್ದೆ ನಂತರ ಕುಡಿಯಲು ಅಂತ ನಾವು ಆರಿಸಿಟ್ಟ ಆ ಕಪ್ಪು ಸಾಸರ್ ಮರುಕದಿಂದ ನೋಡ್ತಾ ಇತ್ತು. ಮಲಗುವ ಮುಂಚೆ ಓದಲು ಅಂತ ಆರಿಸಿಟ್ಟ ಪುಸ್ತಕದ ಅಕ್ಷರಗಳು ಪ್ರಶ್ನಾರ್ತಕ ಚಿನ್ಹೆ ಆಗಿ ಕಾಡ್ತಾ ಇವೆ. ಏನ್ ಅಂತ ಹೇಳಲಿ ಇವರಿಗೆಲ್ಲ, ಹೇಳಿ ಹೋಗು ಕಾರಣ. ಅವರಂತೆ ಇವತ್ತು ನನ್ನ ಮನಸ್ಸೇ ನನಿಗೆ ಪ್ರಶ್ನೆ ಹಾಕಿದೆ. ನನ್ನ ಒಬ್ಬಂಟಿ ಬದುಕಲ್ಲಿ ನೆರಳಾಗಿ ಜೊತೆಯಾಗಿ ಬಂದೆ. ಆ ನೆರಳ ಜಾಡು ಹಿಡಿದು ನಾನು ನಿನ್ನ ನೋಡೋ ಅಷ್ಟ್ರಲ್ಲಿ ಎಲ್ಲಿಗೆ ಕಾಣೆ ಆದೇ?
ಯಾವಾಗಲು ಕರೆಕ್ಟ್ ಟೈಮ್ಗೆ ಬಂದು, ಭೇಟೆಯಾದ ಕೊಡಲೆ ಒಂದೇ ಉಸಿರಲ್ಲಿ ಅವತ್ತು ನಡೆದದ್ ಎಲ್ಲಾ ಒಪ್ಪುಸ್ಕೊಂಡು. ಒಬ್ಬರಿಗೊಬ್ಬರು ನೆನಸಿಕೊಂಡ ಕ್ಷಣಗಳು, ಹಾಡಿದ ಮೌನ ಗೀತೆಗಳು, ಮನದ ಮೂಲೆಯಲ್ಲಿ ಕಂಡ ನಿನ್ನ ಝಲಕ್, ಕಂಪ್ಯೂಟರ್ ಮೌಸ್ ನಲ್ಲಿ ಸವಿದ ನಿನ್ನ ಕೈ ಬಿಸಿ, ನಿನ್ನ ಇರುವಿಕೆಗಾಗಿ ಹಪಹಪಿಸಿದ ಘಂಟೆಗಳು ಎಲ್ಲ ಹೇಳ್ಕೊಳ್ತಾ ಇದ್ವಿ. ಭೇಟಿಯಾಗೊ ಮುಂಚೆ ಒಬ್ಬರಿಗೊಬ್ಬರು sms ಆಗಲಿ, ಫೋನ್ ಆಗಲಿ, ಈ-ಮೇಲ್ ಆಗಲಿ ನಿಷಿದ್ದ. ಭೇಟಿ ಆಗೋ ಮುಂಚೆ ನಮ್ಮ ನಮ್ಮ ಜಗತಿನಲ್ಲಿ ಇದ್ದು, ಸಿಕ್ಕ ಕೂಡಲೇ ಇಬ್ಬರದು ಒಂದೇ ಜಗತ್ತು ಅಂತ ನಮಗೆ ನಾವೇ ಮಾಡಿಕೊಂಡ ನಿರ್ಧಾರ ಮರೆತು ಹೋಯ್ತಾ!. ಏಕೆಂದರೆ ನಮಗೆ ಪ್ರೀತಿ ಆರಾಧನೆಯಲ್ಲ, ಚಡಪಡಿಕೆಯಲ್ಲ, ದುಗುಡ ಅಲ್ಲ. ಅದು ಬೆಚ್ಚಗಿನ, ಅಕ್ಕರೆಯ, ಒಲವಿನ ಸ್ನೇಹ.
ಬೆಳದಿಂಗಳ ಬೆಳಕಲ್ಲಿ ಇಬ್ಬರು ಕೈ ಹಿಡಿದು ನಡೆದ ದೂರಗಳೆಷ್ಟೋ! ನಮ್ಮ ನಡಿಗೆಯಲ್ಲಿ ಮಾತಿಗಿಂತ ಮೌನಕ್ಕೆ ಜಾಸ್ತಿ ಜಾಗ, ಆ ಮೌನದಲ್ಲಿ ಹಂಚಿಕೊಂಡ ಭಾವನೆಗಳೆಷ್ಟೋ! ನನ್ನ ಕಣ್ಗಲ ತುಂಟ ಪ್ರಶ್ನೆಗಳಿಗೆ ನಿನ್ನ ಕಿರು ನಗೆಯೆ ಉತ್ತರ. ಸೂರ್ಯನ ಕಿರಣಗಳ ಸ್ಪರ್ಶಕ್ಕೆ ಬಳ್ಳಿ ಹೂ ನೀಡಿ ಉತ್ತರಿಸುವಂತೆ. ನಮ್ಮ ನಡುವೆ ಇದ್ದ ಮೌನ, ಪ್ರೀತಿ ಬಲಿತ ನಂತರದ ಅಥವಾ ಪ್ರೀತಿ ಹುಟ್ಟುವ ಮೊದಲಿನ ಮೌನವ ಅಂತ ಇಂದು ಸಂದೇಹ ಆಗ್ತಾ ಇದೆ ಕಣೆ!. ನೀನು ಹೇಗಿದ್ದೀಯ, ಹೇಗೆ ಕಾಣ್ತೀಯ, ನಿನ್ನ ಇರುವಿಕೆಯ ಒಂದು ಅತಿ ಚಿಕ್ಕ ಸುಳಿವು ಇಲ್ಲದೇ ಸುಮ್ಮನೆ ಇಷ್ಟು ದಿವಸ ಕೈಹಿಡಿದು ನಡೆದೇ, ನನ್ನ ಎಲ್ಲಾ ಭಾವನೆಗಳನ್ನ ಹೇಳಿಕೊಂಡೆ. ಇವತ್ತು ನನ್ನ ನೆರಳು ಕೂಡ ನನ್ನಷ್ಟೇ ಒಂಟಿ ಒಂಟಿ. ಇಷ್ಟು ದಿವಸ ನನ್ನ ಕನಸಲ್ಲಿ ಬರ್ತಾ ಇದ್ದಿ ಇಷ್ಟೆಲ್ಲಾ ಮಾಡ್ತಾ ಇದ್ವಿ ಆದರೆ ಇವತ್ತು ಯಾಕೆ ನನ್ನ ಕನಸಲ್ಲಿ ಬರಲಿಲ್ಲ ನೀನು? ನಮ್ಮ ಪ್ರೀತಿಯ ಆಯಸ್ಸು ಇಷ್ಟೇನಾ? ವಾಸ್ತವದಲ್ಲಿ ಪ್ರೀತಿಗೆ ಮೋಸ ಆಗುತ್ತೆ ಅಂತ ಕೇಳಿದ್ದೆ ಆದರೆ ನಂಗೆ ಕನಸಲ್ಲು ಮೋಸಾನ:( . ಸರಿ ಚಂದ್ರ ಗಾಢ ನಿದ್ರೆಗೆ ಹೋಗುವ ಮುಂಚೆ, ಸೂರ್ಯ ಹಾಯ್ ಹೇಳುವ ಮೊದಲು ಬೇಗ ಬಂದು ಬಿಡು ಇವತ್ತು . ಕಾಯ್ತಾ ಇರ್ತೀನಿ...
Job search experience
15 years ago
5 ಪ್ರತಿ ದನಿ:
Hi MP,
Tumba nayavada nirupane. Bahala ista ayithu.
Ninna kanasina hudugi nanna college girl friend na nepasidalu.
Thanks. Nanna hendatige matra helbeda :-)
--Ashu
Tumba danyavadagalu... che idu mosa alva hendati iruvaaga, gal fre nenap madkolodu!
Hi MP,
very good article :)
keep it up
Rudresh
ಲೋ ಹರ್ಷ ಇದುನ್ನ ಅಪ್ಪಿ ತಪ್ಪಿ ಯೋಗರಾಜ್ ಭಟ್ ಅಥವಾ ಗಣೇಶ್ ಗೆ ತೋರಿಸಬೇಡ .. ಇಬ್ರು ಅವ್ರ ಮುಂದಿನ ಮೂವಿ ನಲ್ಲಿ ಹಾಕ್ಕೊಂಡು ಬಿಡ್ತಾರೆ....
ಹುಷಾರು ಯಾವ್ ಹುಡ್ಗಿಗೆ ತೋರಿಸಬೇಡ ಆಮೇಲೆ ಅವಳಿಗೆ ಸಕ್ರೆ ಖಾಯ್ಲೆ ಬರುತ್ತೆ..
Post a Comment