CLICK HERE FOR THOUSANDS OF FREE BLOGGER TEMPLATES »

Watch Lucia Movie online with English subtitles

Wednesday 15 December, 2010

ಟೆಕ್ಕಿ ಅಂತ ಬದ್ಕುತಿದ್ದೆ..

ನನ್ನ ಮದುವೆಯ ಪ್ರಯುಕ್ತ.....

ಮೂಲ ಗೀತೆ: ಶಿವ ಅಂತ ಹೋಗುತಿದ್ದೆ ರೋಡಿನಲ್ಲಿ..
ಚಿತ್ರ : ಜಾಕಿ

ಟೆಕ್ಕಿ ಅಂತ ಬದ್ಕುತಿದ್ದೆ ಬೆಂಗಳೂರಲ್ಲಿ
ಸಿಕ್ಕಾಪಟ್ಟೆ ಕನಸು ಇತ್ತು ವೀಕೆಂಡ್ ನಲ್ಲಿ
ಅರ್ದಂಬರ್ದ ಕವಿತೆ ಇತ್ತು ಹಾರ್ಟಿನಲ್ಲಿ
ನೀ ಕಂಡೆ ಹುಡುಕಾಟದಲಿ..

ಕಂಡು ಕಂಡು ಬಿದ್ದಂಗಾಯಿತು ಹಳ್ಳದಲಿ
ಕಂಬ್ಳಿ ಹುಳ ಬಿಟ್ಟಾಂಗಾಯಿತು ಹಾರ್ಟಿನಲಿ
ಕಚಗುಳಿ ಇಟ್ಟಾಂಗಾಯಿತು ಬೆನ್ನಿನಲಿ
ನೀ ಕುಂತಾಗ ಎದುರಿನಲಿ
ಎದುರಿನಲಿ...ಎದುರಿನಲಿ...ಎದುರಿನಲಿ

ಜಾಸ್ತಿ ಹೊತ್ತು .. ನೋಡoಗಿಲ್ಲ
ಸುಮ್ನೆ ಸ್ಮೈಲು.. ಕೊಡಂಗಿಲ್ಲ

ಜಾಸ್ತಿ ಹೊತ್ತು .. ನೋಡoಗಿಲ್ಲ
ಸುಮ್ನೆ ಸ್ಮೈಲು.. ಕೊಡಂಗಿಲ್ಲ
ಅಯ್ಯೊ ಪಾಪ ಹುಡ್ಗಿ ಜೀವ ಹೆದರುವುದು
ತು ನಂಗೆ ಯಾಕೆ ಹಿಂಗೆ ಎಲ್ಲ ಅನಿಸುವುದು

ಒಂದು ಮಾತು.. ಕೇಳಲಿಲ್ಲ
ಒಂದು ಮಾತು ಕೇಳಲಿಲ್ಲ..ಬೇರೆ ಯಾರನು ನೋಡಲಿಲ್ಲ
ನನ್ನ ಅರ್ದ ಕವಿತೆ ಕಿತ್ತುಕೊಂಡು
ತಡ ಮಾಡದೆ ಪೂರ್ತಿ ಗೀಚಿ ಬಿಟ್ಲು
software ಅಂತ ಹುಡುಗ ನಾನು ತುಂಬ ಮೃದು
software ಅಂತ ಹುಡುಗ ನಾನು ತುಂಬ ಮೃದು
ಹೆಣ್ ಮಕ್ಳೇ ವೀಕು ಗುರು
ರಾಂಗು ಗುರು.. ರಾಂಗು ಗುರು.. ರಾಂಗು ಗುರು..ರಾಂಗು ಗುರು

ಒಂದು ಮನೆ .. ಬಾಡಿಗೆ ರೇಟು
ಒಂದು ಮನೆ ಬಾಡಿಗೆ ರೇಟು ಹತ್ತು ಸಾವಿರ ಆಗಿ ಹೋಯ್ತು
ಇಜಿಯಾಗಿ ಹೇಗೆ ನಾನು ಹ್ಞೂ ಅನ್ನಲಿ ಅದರಲ್ಲು ಮೊದಲನೆ ಭೇಟಿಯಲಿ
ಗ್ಯಾಸ್ ಕಾರ್ಡ್ ಬೇಕೆ ಬೇಕು ಸಂಸಾರಕ್ಕೆ
ಗ್ಯಾಸ್ ಕಾರ್ಡ್ ಬೇಕೆ ಬೇಕು ಸಂಸಾರಕ್ಕೆ
ಈ ಮದುವೆ ಬೇಕಾ ಗುರು
ಬೇಕು ಗುರು..ಬೇಕು ಗುರು..ಬೇಕು ಗುರು..ಬೇಕು ಗುರು

ಟೆಕ್ಕಿಅಂತ ಬದ್ಕುತಿದ್ದೆ ಬೆಂಗಳೂರಲ್ಲಿ
ಸಿಕ್ಕಾಪಟ್ಟೆ ಕನಸು ಇತ್ತು ವೀಕೆಂಡ್ ನಲ್ಲಿ
ಅರ್ದಂಬರ್ದ ಕವಿತೆ ಇತ್ತು ಹಾರ್ಟಿನಲ್ಲಿ
ನೀ ಕಂಡೆ ಹುಡುಕಾಟದಲಿ

Friday 21 May, 2010

ನಾ ಕವಿ - 21


ತವಕ
ಅವಳ ಕನಸಲ್ಲಿ ನಾಯಕನಾಗುವ ತವಕ
ಅವಳ ಹಾಡಿನ ರಾಗಕ್ಕೆ ಸ್ವರವಾಗುವ ತವಕ

ತವಕ
ಅವಳ ನಡಿಗೆಯಲ್ಲಿ ಕೈ ಹಿಡಿದು ಜೊತೆಯಾಗುವ ತವಕ
ಅವಳ ತುಟಿಯಂಚಿನ ಕಿರುನಗೆಗೆ ಕಾರಣವಾಗುವ ತವಕ

ತವಕ
ಮೊದಲ ಮಾತಿನಲ್ಲಿ ಅವಳ ಮೌನ ಕಸಿಯುವ ತವಕ
ಅವಳ ತವಕದಲ್ಲಿ ಮೂಡಿ ಬಂದ ಕವಿತೆ ತಂದಿದೆ ಎಂಥಹ ಪುಳಕ!

Friday 26 March, 2010

ಮತ್ತೊಮ್ಮೆ ಕವಿ ಗೋಷ್ಠಿ

ಒಂದು ಕವಿತೆಯ ಕಂಡು ಸ್ನೇಹಿತರ ಮನದಲ್ಲಿ ಮೂಡಿದ ಪದಗಳ ಲಹರಿ.....

ಮೂಲ ಕವಿತೆ :
"ನೂರೆಂಟು ನೆನಪುಗಳ ಗುಂಪು
ಹುಡುಕಿಹೆನು ಅದರಲಿ ನಿನ ಕಂಪು
ನಿನ ನೋಡುವ ಆಸೆ ಬಹಳಷ್ಟು
ಎನ್ ಕುತೂಹಲ...

ಕಾಣುವೆ ನಾ ನಡೆವ ದಾರಿಯಲಿ
ಕರಗುವೆ ಮರೀಚಿಕೆಯಂತೆ ಸಮೀಪಿಸಿದಷ್ಟು
ಆಟದಲಿ ನನ್ನ ಕಾಡುವೆ ನೀನೆಷ್ಟು
ಎನ್ ಕುತೂಹಲ...

ಛಾವಾಣಿಯ ತುದಿಯಲಿ ನಿಂತು
ಕೂಗಿಹೆನು ನಿನ್ನನು ಇಂತು
ಬೇಡಿಹೆನು ತಂಗಾಳಿಯ ತರಲು ನಿನ ಕಂಪು
ಎನ್ ಕುತೂಹಲ... "
-vadiraj

ನಾನು

"ನೂರೆಂಟು ಪ್ರಶ್ನೆಗಳ ಗಂಟು
ಹುಡುಕಿಹೆನು ಅದರಲ್ಲಿ ನಿನ್ನ ದಂಟು
ನಿನ್ನ ಕೇಳುವಾಸೆ ಬಹಳಷ್ಟು
ಹೇಳು ಯಾರ್ ಚೆಲುವೆ ?

ಕಾಣುವೆ ನಾ ನಿನ್ನ ಕವಿತೆಯಲ್ಲಿ
ಕರುಗುತಿರುವೆ ನೀ ಚೆಲುವೆಯ ನೆನೆದಷ್ಟು
ಗೆಳೆಯರಲ್ಲಿ ಮುಚ್ಚಿಡುವೆ ಇನ್ನೆಷ್ಟು
ಹೇಳು ಯಾರ್ ಚೆಲುವೆ ?"


Vadi

"ಯಾರಿಲ್ಲ ಗೆಳೆಯ ವಾಸ್ತವದಲ್ಲಿ
ಇರುವಳು ಚೆಲುವೆ ಕಲ್ಪನೆಯಲ್ಲಿ
ನೂರೆಂಟು ಭಾವನೆಗಳ ಮುಡಿಸುತ ..
ನೂರೆಂಟು ಮೋಹಗಳ ಕಲ್ಪಿಸುತ .. "


Harish

"ಯೋಚಿಸಿದೆ ಯಾಕೆ ಕವಿಗೋಷ್ಠಿ ಆರಂಬವಾಯಿತೆಂದು
ಅನಿಸುತಿದೆ ಯಾಕೋ ನಿಮಗೆ ಕೆಲಸವಿಲ್ಲವೆಂದು ….
ಹತ್ತಿದೆ ನನ್ನ ಮನದಲಿ ಬೆಂಕಿ ಇಂದು …..
ಕೇವಲ ನನಗೆ ಯಾಕೆ ಇಷ್ಟು ಕೆಲಸ ವಿರುವುದೆಂದು …"

Girish

"ಮರುಗದಿರು ಗೆಳೆಯ ನಿನ್ನ ಬವಣೆ ಕಂಡು
ನನ್ನ ಬಾಲಕ್ಕೆಕೆ ಲಕ್ಸ್ಮಿ ಪಟಾಕಿ ಎಂದು.....
ಸಂತೈಸಿಕೋ ನಿನ್ನ ಗೆಳೆಯರ ಬಾಲದ ರಾಕೆಟ್ ಕಂಡು....."

Nitin

"ಹುಡುಗಿ ನಿನ್ನ ಎಲ್ಲೇ ಹುಡುಕಲಿ
ನಿನ್ನ ನೆನಪು ಸದಾ ಕಣ್ಣಲಿ
ನೀನಿಲ್ಲದೆ ಹೇಗೆ ಬದುಕಲಿ
ಇರು ನೀ ನನ್ನ ಮನದಲ್ಲಿ
ಇಲ್ಲವಾದರೆ ಹೇಗೆ ಬದುಕಲಿ"


ಈಗ ಮೂಡಿ ಬರಲಿ ನಿಮ್ಮ ಪದಗಳ ಲಹರಿ...

Tuesday 2 March, 2010

ನಾ ಕವಿ 20

Inspired by: LIFE

ನೀ ಹಿಂಗ್ಯಾಕೆ?
ಪ್ರೀತಿಸಿದಷ್ಟು ದೂರ ಹೋಗುವೆ ಭಾವನೆಯ ಬಯಕೆಯಂತೆ.
ಮರೆತಷ್ಟು ಮರಳಿ ಬರುವೆ ನೆನಪಿನ ನಿಷ್ಟೆಯಂತೆ.

ನೀ ಹಿಂಗ್ಯಾಕೆ?
ಒಲವಿನ ಮಳೆಗರೆದಷ್ಟು ನಲಿವಾಗುವೆ ಕನಸಿನ ಕನವರಿಕೆಯಂತೆ.
ಸಾಧನೆಯ ಮೆಟ್ಟಿಲೇರಿದಷ್ಟು ಮುದ ನೀಡುವೆ ಮುಂಜಾವಿನ ಮಂಜಿನಂತೆ.

ನೀ ಹಿಂಗ್ಯಾಕೆ?
ಖಾಲಿಪೀಲಿ ಜೀವನದ ನಿನ್ನ ವಿಸ್ಮಯ ಉತ್ತರಿಸು ಬಾಬದುಕೆ


Powered by: ಶ್ರೀಹರ್ಷ


From: rudresh angadi [mailto:rudreshaa@gmail.com]
Sent: Tuesday, March 02, 2010 1:59 PM
To: harsha
Subject: Re: Naa kavi 20


nice one MP :-)

From: VadirajP.Kadur
Sent: Tuesday, March 02, 2010 2:36 PM
To: harsha; Nitin.Kulkarni; 'Pavan Nagaraj Dixit'; 'HarishC'; 'Halageri, Milind Indiresh'; 'Girish'
Subject: RE: Naa kavi 20

Last line punching ada le mulla….I like it so much!

From: Nitin.Kulkarni
Sent: Tuesday, March 02, 2010 2:37 PM
To: VadirajP.Kadur; harsha; 'Pavan Nagaraj Dixit'; 'HarishC'; 'Halageri, Milind Indiresh'; 'Girish'
Subject: RE: Naa kavi 20

Wah wah wah!!!!!!!!!!!!!!!!!!!!!!!!!!!!

From: Harish C
Sent: Tuesday, March 02, 2010 2:44 PM
To: 'Nitin.Kulkarni'; 'VadirajP.Kadur'; 'harsha'; 'Pavan Nagaraj Dixit'; 'Halageri, Milind Indiresh'; 'Girish'
Subject: RE: Naa kavi 20


Wah waha…harsha

From: Pavan Nagaraj Dixit
Sent: Tuesday, March 02, 2010 2:41 PM
To: VadirajP.Kadur; harsha; Nitin.Kulkarni; 'HarishC'; 'Halageri, Milind Indiresh'; 'Girish'
Subject: RE: Naa kavi 20


Cholo bardile……………

2010/3/2 anil kumar

Fantastic le MP nin kavithe...... Mast ada...

From: Nalina Reddy
Sent: Wednesday, March 03, 2010 10:37 PM
To: harsha
Subject: Re: Naa kavi 20

Its super.

Who is she?

Monday 22 February, 2010

ನಾ ಕವಿ 19

(ಮೊನ್ನೆ ಶಿವರಾತ್ರಿ ಪ್ರಯುಕ್ತ 'ಅಥಣಿ'ಗೆ (ಬೆಳಗಾಂ ಜಿಲ್ಲೆ ) ಹೋಗಿದ್ದೆ. ಅಲ್ಲಿ ವಿವಿಧ ರೀತಿಯ ಭಕ್ತಿ ಕಂಡು ಬರೆದದ್ದು)

ಭಕ್ತಿ...
ಸಂಗೀತ ಹಾಡಿ ತೋರುವುದೊಂದು ಭಕ್ತಿ, ಅದ ಕೇಳಿ ಧ್ಯಾನಿಸುವುದು ಇನ್ನೊಂದು ಭಕ್ತಿ
ಹೂ ಪೋಣಿಸಿ ಮಾರುವುದೊಂದು ಭಕ್ತಿ, ಅದ ಕೇಳದ ದೇವರಿಗೆ ಮುಡಿಸಿ ಬೀಗುವುದಿನೋಂದು ಭಕ್ತಿ

ಭಕ್ತಿ...
ಮಜ್ಜನಕ್ಕೆ ಬಿಸಿ ನೀರ ಅಣಿಸುವುದೊಂದು ಭಕ್ತಿ, ಅದರ ಬಿಸಿಗೆ ಬಸವ ಎನ್ನುವುದಿನೋಂದು ಭಕ್ತಿ
ಪದಗಳ ಜೋಡಿಸಿ ವಚನ ಬರೆಯುವುದೊಂದು ಭಕ್ತಿ, ಅದ ಕೇಳಿ ಬರೆದ ಈ ಕವಿತೆ ನನ್ನ ಭಕ್ತಿ