ಅಬ್ಬಾ ಎಷ್ಟು ಖುಷಿ ಆಯ್ತು ನಿನ್ನ ಮಾತು ಕೇಳಿ ಇವತ್ತು. ಮನಸ್ಸಿನಲ್ಲಿ ಭಾವನೆಗಳು ಹೋಲಿ ಆಡಿದಂತೆ, ನೊಂದ ಹೃದಯಕ್ಕೆ ಒಲವಿನ ಮಳೆ ಸುರಿದಂತೆ, ಕೀವುಗಟ್ಟಿದ ಗಾಯ ಒಡೆದಾಗ ಬರುವ ನೋವಿನ ಹಿಂದಿನ ಸಂತಸದಂತೆ, ಕಿಕ್ಕಿರಿದ ಬಸ್ಸಿನಲ್ಲಿ ಆಗುಂತಕ ಸುಂದರಿ ನನ್ನ ನೋಡಿ ನಕ್ಕಂತೆ. ಹಾ ಹಾ ನೋಡು ಆಗಲೆ ನನ್ನಲಿರೋ ಕವಿ ಪೈಪೊಟಿಗೆ ಇಳಿದ್ದಿದಾನೆ ನನ್ನ ಜೊತೆ. ಈ ಪ್ರೀತಿನೆ ಹಾಗೆ ಅಲ್ವಾ ನಮಗೆ ಬೇಡವಾದಾಗ ಬರುತ್ತೆ, ಆಮೇಲೆ ನಮಗೆ ತುಂಬ ಬೇಕು ಅಂದಾಗ ಇರೋದಿಲ್ಲ. ಕವಿತೆಗೆ ಸಂಗೀತ ಸೇರಿ ಕವಿತೆ ಹಾಡಾದಂತೆ, ನಾ ಬರೆದ ನಿನ್ನ ನೆನಪುಗಳ ಕವಿತೆಗೆ ನಿನ್ನ ಸನಿಹ ಸೇರಿ ಹಾಡಾಯಿತು ಇಂದು. ಇಷ್ಟು ವರ್ಷದ ಒಡನಾಟದಲ್ಲಿ ನಿನ್ನ ಧ್ವನಿ ಹೇಗೆ ಕೇಳಿಸುತ್ತೆ ಅಂತ ಇವತ್ತು ಗೊತ್ತಾಯಿತು ನೋಡು.
ವೀಕೆಂಡ ಅಂದರೆ ಬರಿ ನಿದ್ದೆ ಅಂದುಕೊಂಡಿದ್ದ ನನಿಗೆ, ಅದು ಅಲ್ಲದೆ ಬೇರೆ ಜಗತ್ತು ಇದೆ ಅಂತ ತೋರಿಸಿ ಕೊಟ್ಟವಳು ನೀನೆ ಅಲ್ವಾ. ಭಾನುವಾರ(?) ಬೆಳಿಗ್ಗೆ ೫.೩೦ಗೆ ಎದ್ದು ನಮ್ಮ ಫ಼ವರೆಟ್ ಜಾಗಿಂಗ್ ಸೂಟ್ ಹಾಕಿ ಕೈಹಿಡಿದು ಸುಮ್ಮನೆ ರೋಡಿಗೆ ಹಾರಿದ್ದ್ವಿ. ಹೌದು ಬೆಂಗಳೂರು ಹೀಗೂ ಉಂಟೆ ಅಂತ ಆಶ್ಚರ್ಯ ಆಯ್ತು. ಮಂಜು ತುಂಬಿದ ಖಾಲಿ ಖಾಲಿ ರಸ್ತೆಗಳು ’ನಿಮ್ಮ ಪ್ರೀತಿಗೆ ಒಲವಿನ ದಾರಿ ಬೇಗ ಆರಿಸಿಕೊಳ್ಳಿ’ ಅಂತ ಹಾಡುತ್ತಾ ಇದ್ವು. ನಾವಾದರು ಅಷ್ಟೆ ಅಂದು ನಮ್ಮ ನಡಿಗೆಯಲ್ಲಿ ಎಂಥದೊ ಅಕ್ಕರೆ ಬೆರೆತಿತ್ತು. ಸ್ಯಾಂಕಿ ಟ್ಯ್ಂಕ ಪಾರ್ಕ್ ನ ಆ ಇಬ್ಬನಿ ತುಂಬಿದ ಬೆಂಚುಗಳ ಮೇಲೆ ಕುಳಿತು ನೋಡಿದರೆ ಪ್ರಪಂಚ ಎಷ್ಟು ನಿಶ್ಯಬ್ದವಾಗಿತ್ತು. ಮನಸ್ಸಿನಲ್ಲಿ ನೀನು ಆಡಿದ ಆ ಮೂರು ಮಾತುಗಳು ನಿಶ್ಯಬ್ದದಲ್ಲಿ ಎಷ್ಟು ಸ್ಪಷ್ಟವಾಗಿ ನಂಗೆ ಕೇಳಿತ್ತು ಗೊತ್ತಾ?. ಸೂರ್ಯನ ಕಿರಣಗಳು ನೀರಿನ ಮೇಲೆ ನಕ್ಷತ್ರಗಳನ್ನ ಮೂಡಿಸುತ್ತಾ ಇದ್ದರೆ, ನಾವು ಮಾತ್ರ ನಮ್ಮ ಕನಸುಗಳನ್ನ ನೀರಿನಲ್ಲಿ ಈಜೊಕ್ಕೆ ಬಿಟ್ಟು ಖುಷಿಪಡುತ್ತಾ ಇದ್ದ್ವಿ. ಎಷ್ಟೊ ಹೊತ್ತು ಹಾಗೆ ಸುಮ್ಮನೆ ಕುಳಿತು ಎದ್ದು ಬಂದಿದ್ವಿ, ಅವತ್ತು ಮಾತಿಗೂ ರಜಾ! ನಂತರ ಮನೆಯಲ್ಲಿ ಒಂದು ಚಿಕ್ಕ ಸಕ್ಕರೆ ನಿದ್ರೆ, ಆ ನಿದ್ರೆಯ ತುಂಬ ನಿನ್ನ ನೆನಪುಗಳ ಗಜ಼ಲ್. ಎಷ್ಟು ಲಾಂಗ್ ಆಗಿತ್ತು ಆ ವೀಕೆಂಡು.
ಆದರೆ ನೀನು ಜಗಳ ಆಡಿ ಬಿಟ್ಟು ಹೋದ ಮೇಲಿಂದ ಭಾವನೆಗಳೆ ಇಲ್ಲದೆ ಸುಮ್ಮನೆ ಬದುಕಿದೆ ಥೇಟ್ ನನ್ನ ಕಂಪ್ಯೂಟರ್ ನಂತೆ. ಪಿಕ್ ಪಾಕೆಟ್ ಆದಾಗ ಕಳೆದುಕೊಂಡ ದುಡ್ಡಿಗಿಂತ, ನಮ್ಮ ಬೆಜವಾಬ್ದಾರಿತನಕ್ಕೆ ಮನಸ್ಸು ಪೆಚಾಡಿದಂತೆ ನಿನ್ನ ಗೈರುಹಾಜರಿಗಿಂತ ನಿನ್ನ ನೆನಪುಗಳ ಕಾಟಕ್ಕೆ ಮನಸ್ಸು ಮುದುರಿತು. ದೋಡ್ಡ ಸಂಬಂಧಗಳು ಯಾವಾಗಲು ಚಿಕ್ಕ ಕಾರಣಕ್ಕಾಗಿ ಮುನಿಯುತ್ತೆ ಅಂತ ಕೆಳಿದ್ದೆ, ಅದು ನಮ್ಮ ವಿಷಯದಲ್ಲು ನಿಜ ಆಯಿತು ನೋಡು ಅವತ್ತು. ಪ್ರೀತಿಯಲ್ಲಿ ಸಾರಿ, ಥ್ಯಾಂಕ್ಸ್ ಇರಬಾರದು ಅಂತ ನಾವು ಎಷ್ಟೆ ಹಲುಬಿದರು, ಹೆಚ್ಚು ಪ್ರೀತಿಸೊ ಹುಂಬ ಮನಸ್ಸು ಯಾವುದೊ ಮೂಲೆಯಲ್ಲಿ ಒಂದು ಚಿಕ್ಕ ಸಾರಿ, ಒಂದು ನವಿರಾದ ಥ್ಯಾಂಕ್ಸ್ ಬಯಸುತ್ತೆ ಮತ್ತು ಅದು ಆರೋಗ್ಯಕರ ಕೂಡ. ಆ ಚಿಕ್ಕ ಸಾರಿ ಇವತ್ತು ನೀನು ಫೊನಿನಲ್ಲಿ ಪಿಸುಗುಟ್ಟಿದೆ. ನಮ್ಮ ಎರಡು ವರ್ಷದ ಸ್ನೇಹದಲ್ಲಿ ಎದುರಿಗೆ ಸಿಕ್ಕಾಗ ಎಷ್ಟೊ ಸಾವಿರ ಮಾತುಗಳನ್ನ ಆಡಿದ್ದಿವಿ, ಆದರೆ ಫೊನಿನಲ್ಲಿ ಇದೆ ಮೊದಲು ಮಾತಾಡಿದ್ದು. ಆ ನಿನ್ನ ಚಿಕ್ಕ ಸಾರಿಗೆ ’ಇರಲಿ ಬಿಡು ಪರವಾಗಿಲ್ಲ’ ಅನ್ನೋ ಪುಟ್ಟ ಉತ್ತರ ಈ ಪತ್ರದ ಮೂಲಕ. ಇದನ್ನು ಓದಿ ಮುಗಿಸುವಷ್ಟರಲ್ಲಿ ನಿನ್ನ ಮಗ್ಗುಲಲ್ಲಿ ಇರುತೀನಿ, ಉಳಿದದ್ದು ಅಲ್ಲೆ ಮಾತಾಡೋಣ. ಥ್ಯಾಂಕ್ಸ್.
--ಹರ್ಷ
From: Harsha, Sri (NSN - IN/Bangalore)
Sent: Tuesday, September 01, 2009 1:58 PM
To: ext harsha
Subject: RE: Ini Dani --New post
waha... mattondu preetiya nivedane... image tumba chennagi suite aagide ....

2 ಪ್ರತಿ ದನಿ:
ಹರ್ಷ,
ಬರವಣಿಗೆ ಚೆನ್ನಾಗಿದೆ.... ಸರಾಗವಾಗಿ ಓಡಿಸಿಕೊಂಡು ಹೋಗತ್ತೆ..... ನಿಮ್ಮ ಪ್ರಯತ್ನ ಫಲ ನೀಡಲಿ, ಎಲ್ಲ ವಾಪಸು ಬರಲಿ..... ಅಲ್ಲಿ ನಡೆದದ್ದು,..... ಮಾತಾಡಿದ್ದು....ಹಾಡಾಗಿ ಬರಲಿ...... ಹೂವಾಗಿ ನಗಲಿ.....
ತುಂಬಾ ಧನ್ಯವಾದಗಳು, ನಿಮ್ಮ 'ಮೂಕ ಮನದ ಮಾತು'ಗಳು ಹೀಗೆ ಪ್ರೋತ್ಸಾಹಿಸಲಿ...
Post a Comment