ನನ್ನ ಮದುವೆಯ ಪ್ರಯುಕ್ತ.....
ಮೂಲ ಗೀತೆ: ಶಿವ ಅಂತ ಹೋಗುತಿದ್ದೆ ರೋಡಿನಲ್ಲಿ..
ಚಿತ್ರ : ಜಾಕಿ
ಟೆಕ್ಕಿ ಅಂತ ಬದ್ಕುತಿದ್ದೆ ಬೆಂಗಳೂರಲ್ಲಿ
ಸಿಕ್ಕಾಪಟ್ಟೆ ಕನಸು ಇತ್ತು ವೀಕೆಂಡ್ ನಲ್ಲಿ
ಅರ್ದಂಬರ್ದ ಕವಿತೆ ಇತ್ತು ಹಾರ್ಟಿನಲ್ಲಿ
ನೀ ಕಂಡೆ ಹುಡುಕಾಟದಲಿ..
ಕಂಡು ಕಂಡು ಬಿದ್ದಂಗಾಯಿತು ಹಳ್ಳದಲಿ
ಕಂಬ್ಳಿ ಹುಳ ಬಿಟ್ಟಾಂಗಾಯಿತು ಹಾರ್ಟಿನಲಿ
ಕಚಗುಳಿ ಇಟ್ಟಾಂಗಾಯಿತು ಬೆನ್ನಿನಲಿ
ನೀ ಕುಂತಾಗ ಎದುರಿನಲಿ
ಎದುರಿನಲಿ...ಎದುರಿನಲಿ...ಎದುರಿನಲಿ
ಜಾಸ್ತಿ ಹೊತ್ತು .. ನೋಡoಗಿಲ್ಲ
ಸುಮ್ನೆ ಸ್ಮೈಲು.. ಕೊಡಂಗಿಲ್ಲ
ಜಾಸ್ತಿ ಹೊತ್ತು .. ನೋಡoಗಿಲ್ಲ
ಸುಮ್ನೆ ಸ್ಮೈಲು.. ಕೊಡಂಗಿಲ್ಲ
ಅಯ್ಯೊ ಪಾಪ ಹುಡ್ಗಿ ಜೀವ ಹೆದರುವುದು
ತು ನಂಗೆ ಯಾಕೆ ಹಿಂಗೆ ಎಲ್ಲ ಅನಿಸುವುದು
ಒಂದು ಮಾತು.. ಕೇಳಲಿಲ್ಲ
ಒಂದು ಮಾತು ಕೇಳಲಿಲ್ಲ..ಬೇರೆ ಯಾರನು ನೋಡಲಿಲ್ಲ
ನನ್ನ ಅರ್ದ ಕವಿತೆ ಕಿತ್ತುಕೊಂಡು
ತಡ ಮಾಡದೆ ಪೂರ್ತಿ ಗೀಚಿ ಬಿಟ್ಲು
software ಅಂತ ಹುಡುಗ ನಾನು ತುಂಬ ಮೃದು
software ಅಂತ ಹುಡುಗ ನಾನು ತುಂಬ ಮೃದು
ಹೆಣ್ ಮಕ್ಳೇ ವೀಕು ಗುರು
ರಾಂಗು ಗುರು.. ರಾಂಗು ಗುರು.. ರಾಂಗು ಗುರು..ರಾಂಗು ಗುರು
ಒಂದು ಮನೆ .. ಬಾಡಿಗೆ ರೇಟು
ಒಂದು ಮನೆ ಬಾಡಿಗೆ ರೇಟು ಹತ್ತು ಸಾವಿರ ಆಗಿ ಹೋಯ್ತು
ಇಜಿಯಾಗಿ ಹೇಗೆ ನಾನು ಹ್ಞೂ ಅನ್ನಲಿ ಅದರಲ್ಲು ಮೊದಲನೆ ಭೇಟಿಯಲಿ
ಗ್ಯಾಸ್ ಕಾರ್ಡ್ ಬೇಕೆ ಬೇಕು ಸಂಸಾರಕ್ಕೆ
ಗ್ಯಾಸ್ ಕಾರ್ಡ್ ಬೇಕೆ ಬೇಕು ಸಂಸಾರಕ್ಕೆ
ಈ ಮದುವೆ ಬೇಕಾ ಗುರು
ಬೇಕು ಗುರು..ಬೇಕು ಗುರು..ಬೇಕು ಗುರು..ಬೇಕು ಗುರು
ಟೆಕ್ಕಿಅಂತ ಬದ್ಕುತಿದ್ದೆ ಬೆಂಗಳೂರಲ್ಲಿ
ಸಿಕ್ಕಾಪಟ್ಟೆ ಕನಸು ಇತ್ತು ವೀಕೆಂಡ್ ನಲ್ಲಿ
ಅರ್ದಂಬರ್ದ ಕವಿತೆ ಇತ್ತು ಹಾರ್ಟಿನಲ್ಲಿ
ನೀ ಕಂಡೆ ಹುಡುಕಾಟದಲಿ
Job search experience
15 years ago