(ಮೊನ್ನೆ ಶಿವರಾತ್ರಿ ಪ್ರಯುಕ್ತ 'ಅಥಣಿ'ಗೆ (ಬೆಳಗಾಂ ಜಿಲ್ಲೆ ) ಹೋಗಿದ್ದೆ. ಅಲ್ಲಿ ವಿವಿಧ ರೀತಿಯ ಭಕ್ತಿ ಕಂಡು ಬರೆದದ್ದು)
ಭಕ್ತಿ...
ಸಂಗೀತ ಹಾಡಿ ತೋರುವುದೊಂದು ಭಕ್ತಿ, ಅದ ಕೇಳಿ ಧ್ಯಾನಿಸುವುದು ಇನ್ನೊಂದು ಭಕ್ತಿ
ಹೂ ಪೋಣಿಸಿ ಮಾರುವುದೊಂದು ಭಕ್ತಿ, ಅದ ಕೇಳದ ದೇವರಿಗೆ ಮುಡಿಸಿ ಬೀಗುವುದಿನೋಂದು ಭಕ್ತಿ
ಭಕ್ತಿ...
ಮಜ್ಜನಕ್ಕೆ ಬಿಸಿ ನೀರ ಅಣಿಸುವುದೊಂದು ಭಕ್ತಿ, ಅದರ ಬಿಸಿಗೆ ಬಸವ ಎನ್ನುವುದಿನೋಂದು ಭಕ್ತಿ
ಪದಗಳ ಜೋಡಿಸಿ ವಚನ ಬರೆಯುವುದೊಂದು ಭಕ್ತಿ, ಅದ ಕೇಳಿ ಬರೆದ ಈ ಕವಿತೆ ನನ್ನ ಭಕ್ತಿ
Job search experience
15 years ago